ಮಂಗಳವಾರ, ಮೇ 26, 2026

ಅನಾಮಧೇಯ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಮೇ 26(ಕರ್ನಾಟಕ ವಾರ್ತೆ): ನಗರದ ಸಿರುಗುಪ್ಪ ರಸ್ತೆಯ ಹವಂಬಾವಿ ಸಮೀಪ ಸ್ಪೆöÊಸೀ ಡಾಬಾ ಹತ್ತಿರ ರಸ್ತೆಯ ಪಕ್ಕದ ಚರಂಡಿಯ ಕಟ್ಟೆಯ ಮೇಲೆ ಅಂದಾಜು 60 ರಿಂದ 62 ವರ್ಷ ವಯಸ್ಸಿನ ಅನಾಮಧೇಯ ವ್ಯಕ್ತಿ ಮೇ 21 ರಂದು ಅಸ್ವಸ್ಥನಾಗಿ ಯಾವುದೋ ಖಾಯಿಲೆಯಿಂದ ಮೃತಪಟ್ಟಿದ್ದು, ಮೃತನ ಹೆಸರು ಮತ್ತು ವಿಳಾಸದ ವಿವರಗಳ ಮಾಹಿತಿ ಇಲ್ಲದಿರುವದರಿಂದ ಅನಾಮಧೇಯ ವ್ಯಕ್ತಿ ವಾರಸುದಾರರ ಪತ್ತೆಗಾಗಿ ಬಳ್ಳಾರಿಯ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಪೊಲೀಸರು ಮನವಿ ಮಾಡಿದ್ದಾರೆ. ಚಹರೆ ವಿವರ: ಎತ್ತರ ಅಂದಾಜು 5.5 ಅಡಿ, ತೆಳುವಾದ ಮೈಕಟ್ಟು, ಕೋಲು ಮುಖ, ಎಣ್ಣೆಗೆಂಪು ಬಣ್ಣ, ತಲೆಯಲ್ಲಿ ಬಿಳಿ ಕೂದಲು, ಮುಖದಲ್ಲಿ ಬಿಳಿ ಗಡ್ಡ ಹಾಗೂ ಮೀಸೆಯನ್ನು ಹೊಂದಿರುತ್ತಾನೆ. ಹಳದಿ ಹಾಗೂ ಕೆಂಪು ಮಿಶ್ರಿತ ಬಣ್ಣದ ಉದ್ದ ತೋಳಿನ ಶರ್ಟ್ (ಅಂಗಿ) ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಮೃತನ ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ಬಳ್ಳಾರಿಯ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ದೂ.08392-272022, ಪಿಎಸ್‌ಐ ಮೊ.9480803081 ಅಥವಾ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100, 258102 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ