ಶನಿವಾರ, ಮೇ 16, 2026

ಅಪರಿಚಿತ ವ್ಯಕ್ತಿಯ ಶವ ಪತ್ತೆ; ವಾರಸುದಾರರ ಪತ್ತೆಗೆ ಪೊಲೀಸರ ಮನವಿ

ಬಳ್ಳಾರಿ,ಮೇ 16(ಕರ್ನಾಟಕ ವಾರ್ತೆ): ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಅಸ್ವಸ್ಥಗೊಂಡು ಮೃತಪಟ್ಟಿರುವ ಅಂದಾಜು 40 ರಿಂದ 45 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ವಾರಸುದಾರರ ಪತ್ತೆಗಾಗಿ ಬಳ್ಳಾರಿಯ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಪೊಲೀಸರು ಮನವಿ ಮಾಡಿದ್ದಾರೆ. ಮೇ 12 ರಂದು ಬೆಳಿಗ್ಗೆ ಸುಮಾರು 11.30 ರ ವೇಳೆಗೆ ಬಳ್ಳಾರಿ ನಗರದ ಸಿಟಿ ಬಸ್ ನಿಲ್ದಾಣದ ಬಳಿ ವ್ಯಕ್ತಿ ತೀವ್ರ ಅಸ್ವಸ್ಥಗೊಂಡು ಬಿದ್ದಿದ್ದನು. ಇದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಆಂಬ್ಯುಲೆನ್ಸ್ ಮೂಲಕ ಆತನನ್ನು ಚಿಕಿತ್ಸೆಗಾಗಿ ಬಳ್ಳಾರಿಯ ಬಿಎಂಸಿಆರ್‌ಸಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಮೃತನ ಹೆಸರು ಮತ್ತು ವಿಳಾಸದ ವಿವರಗಳು ಮಾಹಿತಿ ಇರುವುದಿಲ್ಲ. ಚಹರೆ ವಿವರ: ಎತ್ತರ ಅಂದಾಜು 5.5 ಅಡಿ, ತೆಳು ಮುಖಭಾವ, ಸಣ್ಣ ಶರೀರ, ಗೋಧಿ ಬಣ್ಣ, ತಲೆಯಲ್ಲಿ ಕಪ್ಪು ಕೂದಲು, ಹಣೆ ಮಧ್ಯದಲ್ಲಿ ಗಾಯದ ಗುರುತಿದೆ. ಎಡ ಹೆಗಲ (ಭುಜ) ಹತ್ತಿರ ಎರಡು ಮಚ್ಚೆಗಳಿವೆ. ಬಾದಾಮಿ ಬಣ್ಣದ ಅರ್ಧ ತೋಳಿನ ಶರ್ಟ್ (ಅಂಗಿ) ಧರಿಸಿದ್ದು, ಶರ್ಟ್ ಹಿಂಭಾಗದಲ್ಲಿ ‘ಸುಪ್ರೀಮ್' ಹೆಸರಿನ ನಾಮಫಲಕವಿದೆ. ಜೊತೆಗೆ ನೀಲಿ ಬಣ್ಣದ ನಿಕ್ಕರ್ ಧರಿಸಿದ್ದಾನೆ. ಮೃತನ ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ಬಳ್ಳಾರಿಯ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ದೂ.08392-272022, ಪಿಎಸ್‌ಐ ಮೊ.9480803081 ಅಥವಾ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100, 258102 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ