ಸೋಮವಾರ, ಮೇ 25, 2026

ಮೇ 27 ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬಳ್ಳಾರಿ,ಮೇ 25(ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣ ಜೆಸ್ಕಾಂ ಉಪ-ವಿಭಾಗದ ವ್ಯಾಪ್ತಿಯಲ್ಲಿ ತುರ್ತು ಮತ್ತು ತ್ರೆöÊಮಾಸಿಕ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿAದ ಮೇ 27 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. 33/11ಕೆ.ವಿ ಗುಡದೂರು ಉಪ-ಕೇಂದ್ರದಲ್ಲಿ ಶಿಥಿಲಗೊಂಡ ಜಿ.ಒ.ಎಸ್ ಬದಲಾಯಿಸುವ ಕಾರ್ಯ, ತ್ರೆöÊಮಾಸಿಕ ನಿರ್ವಹಣೆ, ದುರಸ್ತಿ ಹಾಗೂ ಲೈನ್‌ಗಳ ಮೇಲಿರುವ ಜಂಗಲ್ ಕಟ್ಟಿಂಗ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಕೆಳಗಿನ ಮಾರ್ಗಗಳು ಹಾಗೂ ಗ್ರಾಮಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು. *ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:* ಎಫ್‌01 - ಡಿ.ಕಗ್ಗಲ್ ಐಪಿ ಮಾರ್ಗದ ಡಿ.ಕಗ್ಗಲ್ ಗ್ರಾಮದ ಕೃಷಿ ಪ್ರದೇಶಗಳು. ಎಫ್‌02 – ಗುಡದೂರು ಐಪಿ ಮಾರ್ಗದ ಗುಡದೂರು ಕೃಷಿ ಪ್ರದೇಶಗಳು. ಎಫ್‌03 - ಹಂದಿಹಾಳ್ ಐಪಿ ಮಾರ್ಗದ ಹಂದಿಹಾಳ್, ಚಾನಾಳ್ ಗ್ರಾಮ ಕೃಷಿ ಪ್ರದೇಶಗಳು. ಎಫ್‌04 – ಗುಡದೂರು ಎನ್‌ಜೆವೈ ಐಪಿ ಮಾರ್ಗದ ಹಂದಿಹಾಳ್, ಚಾನಾಳ್, ಗುಡದೂರು ಗ್ರಾಮಗಳು. ಎಫ್‌05 – ಚಾನಾಳ್ ಐಪಿ ಮಾರ್ಗದ ಚಾನಾಳ್ ಗ್ರಾಮ ಕೃಷಿ ಪ್ರದೇಶಗಳು. ಸಾರ್ವಜನಿಕರು, ವಿದ್ಯುತ್ ಗ್ರಾಹಕರು ಹಾಗೂ ರೈತ ಬಾಂಧವರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ