ಬುಧವಾರ, ಮೇ 20, 2026
ವ್ಯಕ್ತಿ ನಾಪತ್ತೆ: ಪತ್ತೆಗೆ ಮನವಿ
ಬಳ್ಳಾರಿ,ಮೇ 20(ಕರ್ನಾಟಕ ವಾರ್ತೆ):
ಕುಡುತಿನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫೆ.23 ರಂದು ರಾಜೇಶ್ ಎನ್ನುವ 32 ವರ್ಷ ವ್ಯಕ್ತಿ ಬಜಾರ್‌ಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೊರಟಿದ್ದು, ಇದುವರೆಗೆ ಮನೆಗೆ ಮರಳಿ ಬಂದಿರುವುದಿಲ್ಲ. ಈ ಕುರಿತು ಕುಡುತಿನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ವ್ಯಕ್ತಿಯ ಚಹರೆ ಮತ್ತು ವಿಳಾಸ:
ರಾಜೇಶ್ (ತಂದೆ ರಾಮಚಂದ್ರಪ್ಪ), ಜಿಂದಾಲ್‌ನಲ್ಲಿ ಕೆಲಸ, ವಾಸ: ಕುಡುತಿನಿ ಪಟ್ಟಣ, ಬಳ್ಳಾರಿ ತಾಲ್ಲೂಕು. (ಸ್ವಂತ ಊರು: ರಾಣೀಪೇಟೆ, ಹೊಸಪೇಟೆ ಟೌನ್, ವಿಜಯನಗರ ಜಿಲ್ಲೆ).
ಎತ್ತರ ಸುಮಾರು 5.2 ಅಡಿ, ತೆಳ್ಳನೆಯ ಮೈಕಟ್ಟು, ದುಂಡು ಮುಖ, ಗೋಧಿ ಮೈಬಣ್ಣ (ಎಣ್ಣೆಗೆಂಪು), ಸ್ವಲ್ಪ ಗಡ್ಡ ಬಿಟ್ಟಿರುತ್ತಾರೆ. ಮನೆ ಬಿಟ್ಟು ಹೋಗುವಾಗ ತಿಳಿ ಹಳದಿ ಬಣ್ಣದ ಟಿ-ಶರ್ಟ್ ಮತ್ತು ಡಾರ್ಕ್ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾರೆ.
ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ಸಿಕ್ಕಲ್ಲಿ ಕುಡುತಿನಿ ಪೊಲೀಸ್ ಠಾಣೆಯ ಮೊ.9480803078, ತೋರಣಗಲ್ಲು ಡಿವೈಎಸ್‌ಪಿ ಕಚೇರಿ ಮೊ.9480803010, ಸಿ.ಪಿ.ಐ ಕುರುಗೋಡು ವೃತ್ತ ಮೊ.9480803039 ಗೆ ಸಂಪರ್ಕಿಸಬಹುದು ಎಂದು ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ