ಶುಕ್ರವಾರ, ಮೇ 15, 2026
ಮೇ 16 ರಂದು ವಿದ್ಯುತ್ ಗ್ರಾಹಕರ ಕುಂದುಕೊರತೆ ಸಭೆ
ಬಳ್ಳಾರಿ,ಮೇ 15(ಕರ್ನಾಟಕ ವಾರ್ತೆ):
ಜೆಸ್ಕಾಂ ವತಿಯಿಂದ ಬಳ್ಳಾರಿ ನಗರದ ಉಪ-ವಿಭಾಗ 1 ಮತ್ತು 2ರ ವ್ಯಾಪ್ತಿಯ ವಿದ್ಯುತ್ ಗ್ರಾಹಕರಿಗಾಗಿ ಕುಂದುಕೊರತೆಗಳ ಸಭೆ ಹಾಗೂ ಪ್ರಮಾಣಿತ ಕಾರ್ಯಸೂಚಿ ಕುರಿತ ಜಾಗೃತಿ ಸಭೆಯನ್ನು ಮೇ 16 ರಂದು ಬೆಳಿಗ್ಗೆ 10 ಗಂಟೆಗೆ ನಗರ ಉಪ-ವಿಭಾಗ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು (ವಿದ್ಯುತ್), ನಗರ ಉಪ-ವಿಭಾಗ 1 ಮತ್ತು 2 ರವರ ನೇತೃತ್ವದಲ್ಲಿ ನಡೆಯಲಿದ್ದು, ಗ್ರಾಹಕರು ತಮ್ಮ ವಿದ್ಯುತ್ ಸಂಬAಧಿತ ಸಮಸ್ಯೆಗಳನ್ನು ಮತ್ತು ಕುಂದುಕೊರತೆಗಳನ್ನು ಸಭೆಯಲ್ಲಿ ಭಾಗವಹಿಸಿ ಬಗೆಹರಿಸಿಕೊಳ್ಳಬಹುದಾಗಿದೆ.
ಬಳ್ಳಾರಿ ನಗರದ ಉಪ-ವಿಭಾಗ 1 ಮತ್ತು 2ರ ವ್ಯಾಪ್ತಿಯ ಎಲ್ಲಾ ವಿದ್ಯುತ್ ಗ್ರಾಹಕರು ಸಭೆಗೆ ಹಾಜರಾಗಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜೆಸ್ಕಾಂ ನಗರ ಉಪ-ವಿಭಾಗ-1 ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ