ಶುಕ್ರವಾರ, ಮೇ 29, 2026
ಯುವತಿ ಕಾಣೆ ಪತ್ತೆಗೆ ಮನವಿ
ಬಳ್ಳಾರಿ,ಮೇ 29(ಕರ್ನಾಟಕ ವಾರ್ತೆ):
ನಗರದ ಕೌಲ್ ಬಜಾರ್ ನಿವಾಸಿ ಆಫ್ರೀನ್ ಭಾನು ಸುರ್ ಎಂಬ 21 ವರ್ಷದ ಯುವತಿ ಮೇ 21 ರಂದು ಮನೆಯಿಂದ ಹೋರ ಹೊಗಿ ಬರುವುದಾಗಿ ಹೇಳಿ ಪುನ: ಮನೆಗೆ ಬಾರದೇ ಕಾಣೆಯಾಗಿರುವ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಮಹಿಳಾ ಪೊಲೀಸ್ ಠಾಣೆಯ ತನಿಖಾಧಿಕಾರಿ ಮನವಿ ಮಾಡಿದ್ದಾರೆ.
ಕಾಣೆಯಾದ ಯುವತಿಯ ಚಹರೆ: ಎತ್ತರ 5 ಅಡಿ, ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ, ಕೋಲು ಮುಖ ಹೊಂದಿದ್ದು, ಮನೆಯಿಂದ ಹೊರಡುವಾಗ ನೇರಳೆ ಬಣ್ಣದ ಚೂಡಿದಾರ ಧರಿಸಿದ್ದು ಅದರ ಮೇಲೆ ಬುರ್ಖಾ ಹಾಗೂ ಪಿಸ್ತಾ ಬಣ್ಣದ ದುಪ್ಪಟ್ಟು ಧರಿಸಿರುತ್ತಾರೆ. ಕನ್ನಡ, ತೆಲುಗು ಭಾಷೆ ಮಾತನಾಡುತ್ತಾಳೆ.
ಕಾಣೆಯಾದ ಯುವತಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಮಹಿಳಾ ಪೊಲೀಸ್ ಠಾಣೆ ದೂ.08392-272322, 9480803020, ಬಳ್ಳಾರಿ ಎಸ್.ಪಿ ಕಚೇರಿ ದೂ.08392-258400 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ.
=====
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ