ಶುಕ್ರವಾರ, ಮೇ 29, 2026

ಬಳ್ಳಾರಿ: ಸರ್ಕಾರಿ ಐಟಿಐ ಕಾಲೇಜು ಪ್ರವೇಶಾತಿಗೆ ಅರ್ಜಿ ಆಹ್ವಾನ

ಬಳ್ಳಾರಿ,ಮೇ 29(ಕರ್ನಾಟಕ ವಾರ್ತೆ): ನಗರದ ರೇಡಿಯೋ ಪಾರ್ಕ್ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಸಕ್ತ 2026-27 ನೇ ಸಾಲಿಗೆ ವಿವಿಧ ವೃತ್ತಿಗಳ 569 ಸ್ಥಾನಗಳ ಪ್ರವೇಶಕ್ಕಾಗಿ ಆಫ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯ ಪಂಡಿತಾರಾದ್ಯ ಅವರು ತಿಳಿಸಿದ್ದಾರೆ. 10 ನೇ ತರಗತಿ ಪಾಸ್/ಫೇಲ್ ಆದ ಅಭ್ಯರ್ಥಿಗಳು ನೇರವಾಗಿ ಸಂಸ್ಥೆಗೆ ಭೇಟಿ ನೀಡಿ ಆಫ್ ಲೈನ್ ಮೂಲಕ ಅರ್ಜಿ ಪಡೆದು ಖಾಲಿ ಇರುವ ವಿವಿಧ ವೃತ್ತಿಗಳ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಬಹುದು. ಪ್ರತಿದಿನ ಆಫ್ ಲೈನ್ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮಾರನೇ ದಿನವೇ ಮೆರಿಟ್ ಆಧಾರದಲ್ಲಿ ದಾಖಲೆ ಪರಿಶೀಲನೆ ನಂತರ ಪ್ರವೇಶ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಜೂನ್ 02 ರಿಂದ ಆಗಸ್ಟ್ 31 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿದ ಸಂಸ್ಥೆಯಲ್ಲಿ ಮಾತ್ರ ದಾಖಲೆ ಪರಿಶೀಲನೆಗೆ ಕಡ್ಡಾಯವಾಗಿ ಹಾಜರಾಗಬೇಕು. ಸೂಚನೆ: ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ನೀಡುವ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸವನ್ನು ಪ್ರವೇಶಾತಿ ಮತ್ತು ಪರೀಕ್ಷೆ ಮುಗಿಯುವವರೆಗೂ ಬದಲಾವಣೆ ಮಾಡುವಂತಿಲ್ಲ. ಹೆಚ್ಚಿನ ಮಾಹಿತಿಗಾಗಿ ಮೊ.9902351985 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. =======

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ