ಬುಧವಾರ, ಮೇ 20, 2026
ಯುವಕ ನಾಪತ್ತೆ: ಪತ್ತೆಗೆ ಮನವಿ
ಬಳ್ಳಾರಿ,ಮೇ 20(ಕರ್ನಾಟಕ ವಾರ್ತೆ):
ದೊಡ್ಡಮ್ಮನ ಮನೆಗೆ ಹೋಗಿ ಬರುವುದಾಗಿ ಹೇಳಿ ತನ್ನ ಹೀರೊ ಹೋಂಡಾ ಬೈಕ್‌ನಲ್ಲಿ ಹೊರಟ ನಾಗೇಶ್ ಎನ್ನುವ 23 ವರ್ಷದ ಯುವಕ ಏ.19 ರಂದು ನಾಪತ್ತೆಯಾಗಿರುವ ಕುರಿತು ಕುಡುತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅವರು ಮನವಿ ಮಾಡಿದ್ದಾರೆ.
ಶ್ರೀರಾಮರಂಗಾಪುರದಲ್ಲಿರುವ ತನ್ನ ದೊಡ್ಡಮ್ಮನ ಮನೆಯಿಂದ ತನ್ನ ಊರಾದ ಸಿದ್ದಮ್ಮನಹಳ್ಳಿಗೆ ಹೋಗಿ ಬರುವುದಾಗಿ ಹೇಳಿ, ಬೈಕ್ ನಲ್ಲಿ ಹೊರಟಿದ್ದು, ಇದುವರೆಗೆ ಮನೆಗೆ ಮರಳಿ ಬಂದಿರುವುದಿಲ್ಲ.
ಯುವಕನ ಚಹರೆ ಮತ್ತು ಮಾಹಿತಿ:
ನಾಗೇಶ್ (ತಂದೆ ವಿ. ಹನುಮಂತಪ್ಪ), ಕೂಲಿ ಕೆಲಸ. ವಾಸ: ಶ್ರೀರಾಮ ರಂಗಾಪುರ ಗ್ರಾಮ (ಕಂಪ್ಲಿ ತಾಲೂಕು), ಹಾಲಿ ವಾಸ: ಸಿದ್ದಮ್ಮನಹಳ್ಳಿ ಗ್ರಾಮ (ಕುರುಗೋಡು ತಾಲೂಕು, ಬಳ್ಳಾರಿ ಜಿಲ್ಲೆ).
ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ. ತಲೆಯನ್ನು ದೇವರಿಗೆ ಮುಡಿ ಕೊಟ್ಟಿದ್ದು ಸಣ್ಣದಾದ ಕೂದಲುಗಳಿರುತ್ತವೆ. ಹೊರಡುವಾಗ ಹಳದಿ ಬಣ್ಣದ ಅಂಗಿ (ಶರ್ಟ್) ಹಾಗೂ ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಎದೆಯ ಮೇಲೆ ‘ಸಿಸ್ಟರ್’ ಎಂದು ಇಂಗ್ಲೀಷ್ ನಲ್ಲಿ ಹಚ್ಚೆ ಹಾಕಿಸಿಕೊಂಡಿರುತ್ತಾನೆ. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ.
ಯುವಕನ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ಲಭ್ಯ ಆದಲ್ಲಿ ಕುಡುತಿನಿ ಪೊಲೀಸ್ ಠಾಣೆಯ ಮೊ.9480803078, ತೋರಣಗಲ್ಲು ಡಿವೈಎಸ್‌ಪಿ ಕಚೇರಿ ಮೊ.9480803010, ಸಿ.ಪಿ.ಐ ಕುರುಗೋಡು ವೃತ್ತ ಮೊ.9480803039 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ