ಶುಕ್ರವಾರ, ಮೇ 15, 2026
ಅನಾಮಧೇಯ ಮೃತ ಮಹಿಳೆ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಮೇ 15(ಕರ್ನಾಟಕ ವಾರ್ತೆ):
ನಗರದ ಎನ್.ಹೆಚ್.-150(ಎ) ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸುಮಾರು 40 ರಿಂದ 45 ವರ್ಷದ ಅನಾಮಧೇಯ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಬಳ್ಳಾರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಳ ವಾರಸುದಾರರ ಪತ್ತೆಗೆ ಪೊಲೀಸ್ ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ.
ಘಟನೆಯ ವಿವರ:
ಮೇ 13 ರಂದು ಬಳ್ಳಾರಿ-ಬೆಂಗಳೂರು ರಸ್ತೆಯ ಹೆಚ್.ಎಲ್.ಸಿ ಕೆನಾಲ್ ಹತ್ತಿರವಿರುವ ಬಾಲಾಜಿ ಹೋಟೆಲ್ ಮುಂಭಾಗದಲ್ಲಿ ರಸ್ತೆ ದಾಟುತ್ತಿದ್ದ ಅನಾಮಧೇಯ ಮಹಿಳೆಯ ಮೇಲೆ ಅತಿ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದು, ನಿಲ್ಲಿಸದೆ ಪರಾರಿಯಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಕೂಡಲೇ ಬಳ್ಳಾರಿಯ ಟ್ರಾಮಾ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ದಿನಾಂಕ ಮೇ 14 ರಂದು ಕೊನೆಯುಸಿರೆಳೆದಿದ್ದಾರೆ. ಮೃತದೇಹವನ್ನು ವಾರಸುದಾರರ ಪತ್ತೆಗಾಗಿ ಬಿಎಂಸಿಆರ್ ಸಿ ಆಸ್ಪತ್ರೆಯ ಶೀತಲಗೃಹದಲ್ಲಿ ಇರಿಸಲಾಗಿದೆ.
ಚಹರೆ ವಿವರ:
ಎತ್ತರ 5.2 ಅಡಿ, ತೆಳ್ಳನೆಯ ಮೈಕಟ್ಟು, ದುಂಡನೆಯ ಮುಖ, ಕಪ್ಪು ಮೈಬಣ್ಣ, ಪಿಂಕ್ ಬಣ್ಣದ ಶರ್ಟ್, ಡಿಸೈನ್ ಇರುವ ಹಸಿರು ಬಣ್ಣದ ಟಾಪ್, ಕೆಂಪು ಮತ್ತು ಕಪ್ಪು ಬಣ್ಣದ ಡಿಸೈನ್ ಇರುವ ಪ್ಯಾಂಟ್ ಧರಿಸಿರುತ್ತಾಳೆ. ಗುಳಿ ಬಿದ್ದ ಕಣ್ಣುಗಳು ಮತ್ತು ಬಲಗೈ ಮೇಲೆ 'ಎ.ಸಿದ್ದು' ಎಂಬ ಹೆಸರಿನ ಹಚ್ಚೆ ಇರುತ್ತದೆ.
ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಅಥವಾ ವಾರಸುದಾರರು ಕಂಡುಬAದಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100, ಬಳ್ಳಾರಿ ಸಂಚಾರಿ ಪೊಲೀಸ್ ಠಾಣೆ ದೂ.08392-275722, ಪಿ.ಐ ಮೊ.9480803048 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ