ಮಂಗಳವಾರ, ಜೂನ್ 16, 2026
ವಸತಿನಿಲಯದ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ಕಡ್ಡಾಯ ವೈದ್ಯಕೀಯ ತಪಾಸಣೆ: ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು
ಬಳ್ಳಾರಿ,ಜೂ.16(ಕರ್ನಾಟಕ ವಾರ್ತೆ):
ಹದಿಹರೆಯದ ಹೆಣ್ಣುಮಕ್ಕಳಲ್ಲಿ ಕಂಡುಬರುತ್ತಿರುವ ಅಪೌಷ್ಟಿಕತೆ, ರಕ್ತಹೀನತೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಜಿಲ್ಲೆಯ ಎಲ್ಲಾ ವಸತಿಯುಕ್ತ ಶಾಲೆ, ಕಾಲೇಜು ಹಾಗೂ ಹಾಸ್ಟೆಲ್‌ಗಳಲ್ಲಿರುವ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ಕಡ್ಡಾಯವಾಗಿ ವೈದ್ಯಕೀಯ ಆರೋಗ್ಯ ತಪಾಸಣೆ ನಡೆಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಸೂಚಿಸಿದ್ದಾರೆ.
ಸಂಬAಧಪಟ್ಟ ವೈದ್ಯಾಧಿಕಾರಿಗಳು, ಆರ್.ಬಿ.ಎಸ್.ಕೆ ವೈದ್ಯರು ಹಾಗೂ ನಮ್ಮ ಕ್ಲಿನಿಕ್ ವೈದ್ಯರು ಈ ತಪಾಸಣೆಯನ್ನು ನಿಯಮಿತವಾಗಿ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
*ಹದಿಹರೆಯದವರ ಆರೋಗ್ಯದ ಮೇಲೆ ವಿಶೇಷ ನಿಗಾ:*
10 ರಿಂದ 19 ವರ್ಷದ ಹದಿಹರೆಯದ ಪ್ರಾಯದಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ವೇಗವಾಗಿ ಇರುತ್ತದೆ. ಈ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆ, ಲೈಂಗಿಕ ಆರೋಗ್ಯ, ಪೌಷ್ಟಿಕಾಂಶದ ಅಗತ್ಯತೆಗಳು ಹಾಗೂ ಭಾವನಾತ್ಮಕ ಸಮಸ್ಯೆಗಳ ಬಗ್ಗೆ ವಿಶೇಷ ಗಮನ ಹರಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದ್ದಾರೆ.
ವೈದ್ಯಾಧಿಕಾರಿಗಳು ತಪಾಸಣೆ ವೇಳೆ ಪ್ರಮುಖ ಅಂಶಗಳ ಕಡೆಗೆ ಗಮನ ಹರಿಸಬೇಕು. ದೇಹದ ತೂಕ, ಎತ್ತರ ಪರಿಶೀಲನೆ, ಪೋಷಕಾಂಶಗಳ ಕೊರತೆ ಮತ್ತು ರಕ್ತಹೀನತೆಯ ಪರೀಕ್ಷೆ. ಖಿನ್ನತೆ, ಆತಂಕ, ನಿದ್ರೆಯ ಸಮಸ್ಯೆಗಳು ಮತ್ತು ಮೊಬೈಲ್, ತಂತ್ರಜ್ಞಾನದ ವ್ಯಸನದ ಲಕ್ಷಣಗಳ ಬಗ್ಗೆ ನಿಗಾ ವಹಿಸುವುದು. ಕಣ್ಣಿನ ದೃಷ್ಟಿ ಮತ್ತು ಕಿವಿ ಕೇಳುವ ಸಾಮರ್ಥ್ಯದ ತಪಾಸಣೆ. ಮುಟ್ಟಿನ ಸಮಸ್ಯೆಗಳು (ಹೆಚ್ಚು ರಕ್ತಸ್ರಾವ), ಹದಿಹರೆಯದ ಮೊಡವೆಗಳು ಹಾಗೂ ಇತರೆ ಸಮಸ್ಯೆಗಳ ತಪಾಸಣೆ, ಜೊತೆಗೆ ಟಿ.ಡಿ ಹಾಗೂ ಎಚ್.ಪಿ.ವಿ ಲಸಿಕೆಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
*63 ವಸತಿ ಸಂಸ್ಥೆಗಳ 8,933 ಹೆಣ್ಣುಮಕ್ಕಳಿಗೆ ತಪಾಸಣೆ ಭಾಗ್ಯ:*
ಜಿಲ್ಲೆಯಾದ್ಯಂತ ಒಟ್ಟು 63 ವಸತಿಯುಕ್ತ ಶಾಲೆ ಮತ್ತು ಕಾಲೇಜುಗಳಿದ್ದು, ಅವುಗಳಲ್ಲಿರುವ 8,933 ಹೆಣ್ಣುಮಕ್ಕಳ ಆರೋಗ್ಯ ತಪಾಸಣೆಯನ್ನು ಪ್ರತಿ ತಿಂಗಳು ಮಾಡಲಾಗುವುದು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಹನುಮಂತಪ್ಪ ಅವರು ಹೇಳಿದ್ದಾರೆ.
ವಿವಿಧ ತಾಲ್ಲೂಕುಗಳಾದ ಬಳ್ಳಾರಿ-26, ಸಿರುಗುಪ್ಪ-14, ಸಂಡೂರು-14, ಕಂಪ್ಲಿ-05, ಕುರುಗೋಡು-04 ಸೇರಿದಂತೆ ಒಟ್ಟು 63 ಸಂಸ್ಥೆಗಳ ವಿದ್ಯಾರ್ಥಿನಿಯರ ತಪಾಸಣೆ ನಡೆಸಿ, ಪ್ರತಿ ತಿಂಗಳು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಕಚೇರಿಗೆ ಕಡ್ಡಾಯವಾಗಿ ವರದಿ ಸಲ್ಲಿಸಬೇಕು. ಒಂದು ವೇಳೆ ತಪಾಸಣೆ ವೇಳೆ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಕಂಡುಬAದಲ್ಲಿ ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ಶಿಫಾರಸ್ಸು ಮಾಡಬೇಕು ಎಂದು ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
*ರಾಷ್ಟಿçÃಯ ಕಿಶೋರಿ ಸ್ವಾಸ್ಥö್ಯ ಕಾರ್ಯಕ್ರಮದಡಿ ಜಾಗೃತಿ:*
ವೈದ್ಯಕೀಯ ತಪಾಸಣೆಯ ಜೊತೆಗೆ ‘ರಾಷ್ಟಿçÃಯ ಕಿಶೋರಿ ಸ್ವಾಸ್ಥö್ಯ ಕಾರ್ಯಕ್ರಮ’ದಡಿ ವಿದ್ಯಾರ್ಥಿನಿಯರಿಗೆ ಆರೋಗ್ಯ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ. ಹದಿಹರೆಯದ ಗರ್ಭಧಾರಣೆಯ ದುಷ್ಪರಿಣಾಮಗಳು, ಋತುಚಕ್ರದ ನೈರ್ಮಲ್ಯ, ಪೋಕ್ಸೊ ಕಾಯ್ದೆಯ ಅರಿವು, ಲೈಂಗಿಕ ಹಾಗೂ ಸಂತಾನೋತ್ಪತ್ತಿ ಆರೋಗ್ಯ, ಮಾನಸಿಕ ಆರೋಗ್ಯ ಮತ್ತು ಅಪೌಷ್ಟಿಕತೆಯಿಂದಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ