ಬುಧವಾರ, ಜೂನ್ 17, 2026
ರದ್ದಾದ ಪತ್ರಿಕೆಗಳ ಶೀರ್ಷಿಕೆಗಳ ಮರುಸ್ಥಾಪನೆಗೆ ದಂಡ ಪಾವತಿಸಲು ಜೂನ್ 30 ಕೊನೆಯ ದಿನ | ಭಾರತೀಯ ಪತ್ರಿಕೆಗಳ ಪ್ರೆಸ್ ರಿಜಿಸ್ಟಾçರ್ ಜನರಲ್ ಕಚೇರಿ ಪ್ರಕಟಣೆ
ಬಳ್ಳಾರಿ,ಜೂ.17(ಕರ್ನಾಟಕ ವಾರ್ತೆ):
ವಾರ್ಷಿಕ ವರದಿಗಳನ್ನು ಸಲ್ಲಿಸದ ಕಾರಣಕ್ಕಾಗಿ ರದ್ದಾಗಿರುವ ಪತ್ರಿಕೆಗಳ ಶೀರ್ಷಿಕೆಗಳನ್ನು ಮರುಸ್ಥಾಪಿಸಲು ಭಾರತ ಸರ್ಕಾರದ ಪತ್ರಿಕೆಗಳ ಪ್ರೆಸ್ ರಿಜಿಸ್ಟಾçರ್ ಜನರಲ್ ಕಚೇರಿಯು ಪ್ರಕಾಶಕರಿಗೆ ಕೊನೆಯ ಅವಕಾಶವನ್ನು ನೀಡಿದೆ.
ಪ್ರೆಸ್ ಮತ್ತು ರಿಜಿಸ್ಟೆçÃಷನ್ ಆಫ್ ಪಿರಿಯಾಡಿಕಲ್ಸ್ ಕಾಯ್ದೆ, 2023 ರ ನಿಯಮಗಳನ್ನು ಪಾಲಿಸದ ಕಾರಣಕ್ಕಾಗಿ ಹಲವು ಪತ್ರಿಕೆಗಳ ಶೀರ್ಷಿಕೆಗಳನ್ನು ರದ್ದುಗೊಳಿಸಲಾಗಿತ್ತು. ಈ ಕುರಿತು ಪ್ರಕಾಶಕರು ಮತ್ತು ಪಾಲುದಾರರಿಂದ ಬಂದ ಮನವಿಗಳನ್ನು ಪುರಸ್ಕರಿಸಿ, ಇಲಾಖೆಯು ಈ ಅಂತಿಮ ಅವಕಾಶವನ್ನು ಕಲ್ಪಿಸಿದೆ.
ಬಾಕಿ ಇರುವ ದಂಡವನ್ನು ಪಾವತಿಸಲು ಮತ್ತು ವಾರ್ಷಿಕ ವರದಿಯನ್ನು ಸಲ್ಲಿಸಲು 30 ಜೂನ್ 2026 ಕೊನೆಯ ದಿನವಾಗಿದೆ. ರದ್ದಾದ ಪಟ್ಟಿಯಿಂದ ಶೀರ್ಷಿಕೆಯನ್ನು ತೆಗೆದುಹಾಕಲು, ಪ್ರಕಾಶಕರು ಬಾಕಿ ಇರುವ ದಂಡವನ್ನು ಪಾವತಿಸಬೇಕು ಮತ್ತು 2024-25ರ ಆರ್ಥಿಕ ವರ್ಷದ ವಾರ್ಷಿಕ ವರದಿಯನ್ನು ಪ್ರೆಸ್ ಸೇವಾ ಪೋರ್ಟಲ್ (Press Sewa Portal) ಮೂಲಕ ಕಡ್ಡಾಯವಾಗಿ ಸಲ್ಲಿಸಬೇಕು.
ಜೂನ್ 30 ರ ನಂತರ ಯಾವುದೇ ಕಾರಣಕ್ಕೂ ಕಾಲಾವಕಾಶವನ್ನು ವಿಸ್ತರಿಸಲಾಗುವುದಿಲ್ಲ. ಈ ಗಡುವಿನೊಳಗೆ ದಂಡ ಪಾವತಿಸದಿದ್ದರೆ ಶೀರ್ಷಿಕೆಗಳನ್ನು ಶಾಶ್ವತವಾಗಿ ರದ್ದುಗೊಳಿಸಲಾಗುವುದು ಮತ್ತು ಈ ಬಗ್ಗೆ ಯಾವುದೇ ಮೇಲ್ಮನವಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಉಪ ಪ್ರೆಸ್ ರಿಜಿಸ್ಟಾçರ್ ಜನರಲ್ ರತ್ನಾಕರ್ ಪಾಮುಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ