ಸೋಮವಾರ, ಜೂನ್ 15, 2026

ಸಮಗ್ರ ಶಿಕ್ಷಣ ಇಲಾಖೆ: ವಿಶೇಷ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬಳ್ಳಾರಿ,ಜೂ.15(ಕರ್ನಾಟಕ ವಾರ್ತೆ): ಸಮಗ್ರ ಶಿಕ್ಷಣ ಕರ್ನಾಟಕ, ಬಳ್ಳಾರಿ ಜಿಲ್ಲೆಯ ಶಿಕ್ಷಣ ವಿಭಾಗದಡಿ 2026-27ನೇ ಶೈಕ್ಷಣಿಕ ಸಾಲಿಗೆ ಅಗತ್ಯವಿರುವ ವಿವಿಧ ವಿಶೇಷ ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ತಾತ್ಕಾಲಿಕವಾಗಿ ನೇರಗುತ್ತಿಗೆ ಆಧಾರದ ಮೇಲೆ ನೇಮಕಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. *ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ:* ಪ್ರಾಥಮಿಕ ವಿಭಾಗ (1 ರಿಂದ 5ನೇ ತರಗತಿ): ಖಾಲಿ ಇರುವ ಹುದ್ದೆಗಳ ಸಂಖ್ಯೆ- 07. ಅರ್ಹತೆಯು ಆರ್.ಸಿ.ಐ ಸಿ.ಆರ್.ಆರ್ ನಂಬರ್ ಹೊಂದಿರುವ ಡಿ.ಇಡಿ ವಿಶೇಷ ಶಿಕ್ಷಣ ಮುಗಿಸಿರಬೇಕು. ಪ್ರೌಢ ವಿಭಾಗ (6 ರಿಂದ 8ನೇ ತರಗತಿ ಹಾಗೂ 9 ರಿಂದ 12ನೇ ತರಗತಿ): ಖಾಲಿ ಇರುವ ಹುದ್ದೆಗಳ ಸಂಖ್ಯೆ- 07. ಅರ್ಹತೆಯು ಆರ್.ಸಿ.ಐ ಸಿ.ಆರ್.ಆರ್ ನಂಬರ್ ಹೊಂದಿರುವ ಬಿ.ಇಡಿ ವಿಶೇಷ ಶಿಕ್ಷಣ ಮುಗಿಸಿರಬೇಕು. *ಆಯ್ಕೆ ಪ್ರಕ್ರಿಯೆ ಮತ್ತು ಸೇವಾ ಜೇಷ್ಠತೆ:* ಈ ಹಿಂದೆ ಸಮಗ್ರ ಶಿಕ್ಷಣ ಇಲಾಖೆಯಲ್ಲಿ ಬಿ.ಐ.ಇ.ಆರ್.ಟಿ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಅವರ ಸೇವಾ ಜೇಷ್ಠತೆಯನ್ನು ಪರಿಗಣಿಸಿ ಮೊದಲ ಆದ್ಯತೆಯ ಮೇರೆಗೆ ಆಯ್ಕೆ ಮಾಡಲಾಗುವುದು. ನೇಮಕಾತಿಯು ಇಲಾಖೆಯ ನಿಯಮಾವಳಿಗಳನ್ವಯ ನೇರಗುತ್ತಿಗೆ ಮೂಲಕ ನಡೆಯಲಿದೆ. *ಅರ್ಜಿ ಸಲ್ಲಿಸಬೇಕಾದ ವಿಳಾಸ:* ಉಪನಿರ್ದೇಶಕರು (ಆ) ಮತ್ತು ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಶಿಕ್ಷಣ ಅಭಿಯಾನ (ಕೆ.ಎಸ್.ಇ.ಇ.ಬಿ), ಕೋಟೆ, ಬಳ್ಳಾರಿ ಇಲ್ಲಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಜೂ.20 ರ ಒಳಗಾಗಿ ತಲುಪುವಂತೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿ ಹಾಗೂ ವಿವರಗಳಿಗಾಗಿ ಅಭ್ಯರ್ಥಿಗಳು ಕಚೇರಿಯ ವೇಳೆಯಲ್ಲಿ ನೇರವಾಗಿ ಬಳ್ಳಾರಿಯ ಸಮಗ್ರ ಶಿಕ್ಷಣ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಗ್ರ ಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ