ಶುಕ್ರವಾರ, ಜೂನ್ 9, 2023

ಮಹಾನಗರ ಪಾಲಿಕೆ: ಬ್ಯಾನರ್‍ಗಳನ್ನು ನಿಗದಿತ ಸ್ಥಳದಲ್ಲಿಯೇ ಅಳವಡಿಲು ಸೂಚನೆ ಬಳ್ಳಾರಿ,ಜೂ.09(ಕರ್ನಾಟಕ ವಾರ್ತೆ): ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಬ್ಯಾನರ್ ಹಾಗೂ ಪ್ಲೇಕ್ಸ್‍ಗಳನ್ನು ಅಳವಡಿಸುವುದು ನಿಷೇಧಿಸಲಾಗಿದ್ದು, ಸಾರ್ವಜನಿಕರು ಬ್ಯಾನರ್‍ಗಳನ್ನು ಅಳವಡಿಸಲು ಇಚ್ಚಿಸಿದಲ್ಲಿ ಪಾಲಿಕೆಯಿಂದ ನಿಗದಿಪಡಿಸಲಾದ ಖಾಯಂ ಜಾಹೀರಾತು ಫಲಕಗಳಲ್ಲಿ ಮಾತ್ರ ಅಳವಡಿಸಬೇಕು ಎಂದು ಮಹಾನಗರ ಪಾಲಿಕೆಯ ಆಯುಕ್ತ ಎಸ್.ಎನ್.ರುದ್ರೇಶ್ ಅವರು ತಿಳಿಸಿದ್ದಾರೆ. ಮುದ್ರಣದಾರರು ಯಾವುದೇ ಪ್ಲಾಸ್ಟಿಕ್ ಪ್ಲೇಕ್ಸ್, ಪ್ಲಾಸ್ಟಿಕ್ ಬ್ಯಾನರ್‍ಗಳನ್ನು ಮುದ್ರಿಸುವಂತಿಲ್ಲ. ಕೇವಲ ಬಟ್ಟೆ ಬ್ಯಾನರ್‍ಗಳನ್ನು ಮಾತ್ರ ಮುದ್ರಿಸಬೇಕು. ತಪ್ಪಿದಲ್ಲಿ ಕರ್ನಾಟಕ ತೆರೆದ ಸ್ಥಳದ ವಿಕಾರ ಕಾಯ್ದೆ 1951 ರನ್ವಯ ಹಾಗೂ ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ಕಾಯ್ದೆ 1976 ಸೆಕ್ಷನ್ 134 ರಿಂದ 138 ರನ್ವಯ ಕಾನೂನಿನ ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ