ಸೋಮವಾರ, ಜೂನ್ 12, 2023

ಭೋದಕ ಹುದ್ದೆಗಳಿಗೆ ಅರ್ಜಿ ಆಹ್ವಾನ ಬಳ್ಳಾರಿ,ಜೂ.12(ಕರ್ನಾಟಕ ವಾರ್ತೆ) 2023-24 ನೇ ಶೈಕ್ಷಣಿಕ ಸಾಲಿಗೆ ಸಮಗ್ರ ಶಿಕ್ಷಣ-ಸಮನ್ವಯ ಶಿಕ್ಷಣ ವಿಭಾಗದಡಿ ಖಾಲಿ ಇರುವ ಬಿಐಇಆರ್‍ಟಿ ಪ್ರಾಥಮಿಕ ಮತ್ತು ಪ್ರೌಢ ಹುದ್ದೆಗಳಿಗೆ ತಾತ್ಕಾಲಿಕವಾಗಿ ನೇರಗುತ್ತಿಗೆ ಅಡಿಯಲ್ಲಿ ಭೋದಕ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಾಥಮಿಕ ಹಂತ 1 ರಿಂದ 5ನೇ ತರಗತಿ ಆಗಿದ್ದು, ವಿಶೇಷ ಡಿಇಡಿ ಕೋರ್ಸ್ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಪ್ರೌಢ ಶಾಲಾ ಹಂತ 6 ರಿಂದ 12ನೇ ತರಗತಿವರೆಗಿದ್ದು, ವಿಶೇಷ ಬಿಇಡಿ ಪದವಿ ಕೋರ್ಸ್ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹಿಂದೆ ಈ ಇಲಾಖೆಯಲ್ಲಿ ಬಿಐಇಆರ್‍ಟಿಯಾಗಿ ಕಾರ್ಯನಿರ್ವಹಿಸಿರುವ ಅಭ್ಯರ್ಥಿಗಳಿಗೆ ಸೇವಾ ಜೇಷ್ಠತೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗುವುದು. ಇಲಾಖೆ ನಿಯಮಾನುಸಾರ ನೇರಗುತ್ತಿಗೆ ಮೂಲಕ ನೇಮಕಾತಿ ಮಾಡಿಕೊಳ್ಳಲು ಜೂ.14 ರೊಳಗಾಗಿ ಅರ್ಜಿಗಳನ್ನು ನಗರದ ಕೋಟೆ ಪ್ರದೇಶದ ಸಮಗ್ರ ಶಿಕ್ಷಣ ಅಭಿಯಾನದ ಉಪನಿರ್ದೇಶಕರು ಮತ್ತು ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾ ಅಂದಾನಪ್ಪ ವಡಗೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ