ಗುರುವಾರ, ಜೂನ್ 1, 2023
ಆಂತರಿಕ ಲೆಕ್ಕ ಪರಿಶೋಧನೆಗಾಗಿ ಅರ್ಹ ಲೆಕ್ಕ ಪರಿಶೋಧಕ ಕಂಪನಿಗಳಿಂದ ದರಪಟ್ಟಿ ಆಹ್ವಾನ
ಬಳ್ಳಾರಿ,ಜೂ.01(ಕರ್ನಾಟಕ ವಾರ್ತೆ):
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಜಿಲ್ಲಾ ಕಚೇರಿಯಿಂದ 2022-23ನೇ ಸಾಲಿನ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ, ಅಂತರಿಕ ಲೆಕ್ಕ ಪರಿಶೋಧನೆಗಾಗಿ ಅರ್ಹ ಲೆಕ್ಕ ಪರಿಶೋಧಕ ಕಂಪನಿಗಳಿಂದ ದರಪಟ್ಟಗಳನ್ನು ಆಹ್ವಾನಿಸಿದ್ದು, ಆಸಕ್ತಿಯುಳ್ಳ ಅರ್ಹ ಲೆಕ್ಕ ಪರಿಶೋಧಕ ಕಂಪನಿಗಳು ನಿಗಮದ ಜಿಲ್ಲಾ ಕಚೇರಿಗೆ ದರಪಟ್ಟಿಗಳನ್ನು ಜೂ.12 ರೊಳಗಾಗಿ ಸಲ್ಲಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನಗರದ ಕಂಟೋನ್‍ಮೆಂಟ್‍ನ ನಂದಿ ಕಾಲೋನಿಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ದೂ.08392-245551 ಗೆ ಸಂಪರ್ಕಿಸಬಹುದಾಗಿದೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ