ಮಂಗಳವಾರ, ಜೂನ್ 13, 2023
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಪ್ರವೇಶಾತಿ ಪ್ರಾರಂಭ
ಬಳ್ಳಾರಿ,ಜೂ.13(ಕರ್ನಾಟಕ ವಾರ್ತೆ):
ನಗರದ ರೇಡಿಯೋ ಪಾರ್ಕ್ ನ, ಎಸ್ ಬಿ ಐ ಬ್ಯಾಂಕ್ ಎದುರುಗಡೆಯ ಡಯಟ್ ಕಾಲೇಜು ಅವರಣದಲ್ಲಿರುವ
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ 2023- 24 ನೇ ಶೈಕ್ಷಣಿಕ ಸಾಲಿಗೆ ಪ್ರಥಮ ವರ್ಷದ ಬಿ.ಎ ಹಾಗೂ ಬಿ.ಕಾಂ ಪದವಿ ತರಗತಿಗಳಿಗೆ ಪ್ರವೇಶ ಪ್ರಾರಂಭವಾಗಿವೆ.
ನುರಿತ, ಅನುಭವಿ ಅಧ್ಯಾಪಕ ವೃಂದವಿರುವ ವಿದ್ಯಾರ್ಥಿನಿಯರ ಸರ್ಕಾರಿ ಪದವಿ ಕಾಲೇಜು ಆಗಿದ್ದು, ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿನಿಯರು ಈ ಕಾಲೇಜಿನಲ್ಲಿ ಪ್ರವೇಶಾತಿ ಹೊಂದಬಹುದು.
ಪ್ರವೇಶ ಶುಲ್ಕವು ರೂ.3830 ಆಗಿರುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ವೀರ ರಾಘವುಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ