ಶುಕ್ರವಾರ, ಜುಲೈ 7, 2023
ವ್ಯಕ್ತಿ ಕಾಣೆ
ಬಳ್ಳಾರಿ,ಜು.07(ಕರ್ನಾಟಕ ವಾರ್ತೆ):
ರಾಯಚೂರು ರೈಲ್ವೇ ಪೊಲೀಸ್ ಠಾಣೆ ವ್ಯಾಪ್ತಿಯ ರೈಲ್ವೇ ಗಾಡಿ ಸಂ.11302 ಉದ್ಯಾನ್ ಎಕ್ಸ್‍ಪ್ರೆಸ್‍ನಲ್ಲಿ ರವಿ ಎನ್ನುವ 42 ವರ್ಷದ ವ್ಯಕ್ತಿಯು ಜೂ.12 ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣೆಯ ಠಾಣಾಧಿಕಾರಿಗಳು ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ ಗುರುತು: ಎತ್ತರ 5.5 ಅಡಿ, ಗೋಧಿ ಮೈಬಣ್ಣ, ಕೋಲುಮುಖ, ಹಗಲವಾದ ಹಣೆ, ತಲೆಯಲ್ಲಿ ಉದ್ದನೇಯ ಕೂದಲು ಹೊಂದಿದ್ದು, ಬಲಗೈಯಲ್ಲಿ ಹಳದಿ ಬಣ್ಣದ ದಾರ ಹಾಗೂ ಹಿಂದಿ ಅಕ್ಷರದಲ್ಲಿ ‘ರವಿ’ ಅಂತ ಹಚ್ಚೆ ಹಾಕಿಸಿದ್ದು ಇರುತ್ತದೆ.
ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಕೊಲ್ಹಾಪುರಿ ಚಪ್ಪಲ್ಲಿ ಧರಿಸಿರುತ್ತಾನೆ. ಹಿಂದಿ ಮತ್ತು ಮರಾಠಿ ಭಾಷೆ ಮಾತನಾಡುತ್ತಾನೆ.
ಮೇಲ್ಕಂಡ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ರಾಯಚೂರು ರೈಲ್ವೇ ಪೊಲೀಸ್ ಠಾಣೆಯ ದೂ.08532-231716, ಮೊ.9480802111 ಗೆ ಸಂಪರ್ಕಿಸಬಹುದಾಗಿದೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ