ಶುಕ್ರವಾರ, ಜುಲೈ 7, 2023

ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಜು.09 ರಂದು ಬಳ್ಳಾರಿ,ಜು.07(ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯಲ್ಲಿ 110/11ಕೆ.ವಿ ದಕ್ಷಿಣ ವಿದ್ಯುತ್ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ಕೈಗೊಳ್ಳುತ್ತಿರುವುದರಿಂದ ಜುಲೈ 09 ರಂದು ಬೆಳಗ್ಗೆ 10 ರಿಂದ ಸಂಜೆ 05 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಇಂಜಿನಿಯರ್ ಸಂತೋಷಿ ಬಾಯಿ ಅವರು ತಿಳಿಸಿದ್ದಾರೆ. ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳಿವು: ಎಫ್-43 ಫೀಡರ್‍ನ ಸಿದ್ದಾಪುರ ರಸ್ತೆ ಮಾರ್ಗದ ಸಿದ್ದಾಪುರ ರಸ್ತೆ, ಹಲಕುಂದಿ ಎಸ್.ಸಿ ಕಾಲೋನಿ. ಎಫ್-30 ಗುಗ್ಗರಹಟ್ಟಿ ಕೈಗಾರಿಕಾ ಮಾರ್ಗದ ಗುಗ್ಗರಹಟ್ಟಿ ಗ್ರಾಮ, ದಾಲ್ ಮೀಲ್, ಬೈಪಾಸ್ ರಸ್ತೆ. ಎಫ್-27 ಫೀಡರ್‍ನ ಆಂಧ್ರಾಳ್ ಮಾರ್ಗದ ಮುಂಡರಿಗಿ ಗ್ರಾಮ, ಚರಕುಂಟ ಗ್ರಾಮ, ಮಂಗಮ್ಮ ಕ್ಯಾಂಪ್, ಪಾತ್ರ ಬೂದಿಹಾಳ್ ಗ್ರಾಮ, ಆಂಧ್ರಾಳ್ ಗ್ರಾಮ. ಎಫ್-29 ಫೀಡರ್‍ನ ಮಿಂಚೇರಿ ಎನ್.ಜೆ.ವೈ ಮಾರ್ಗದ ಮಿಂಚೇರಿ ಗ್ರಾಮ, ಎಸ್.ಜೆ ಕೋಟೆ ಗ್ರಾಮ, ಮುಂಡರಿಗಿ ಗ್ರಾಮ, ಚರಕುಂಟೆ ಗ್ರಾಮ ಹಾಗೂ ಎಫ್-26 ಚರಕುಂಟ ಐ.ಪಿ ಫೀಡರ್ ಮಾರ್ಗದ ಮುಂಡರಗಿ, ಚರಕುಂಟೆ, ವೈಬೂದಿಹಾಳ್ ಕೃಷಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ