ಶನಿವಾರ, ಜುಲೈ 1, 2023
ಅನಾಮಧೇಯ ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ
ಬಳ್ಳಾರಿ,ಜು.01(ಕರ್ನಾಟಕ ವಾರ್ತೆ):
ತೋರಣಗಲ್ಲು ರೈಲು ನಿಲ್ದಾಣದ ವೇದಿಕೆ ನಂ 3 ರಲ್ಲಿ ದರೋಜಿ ಎಂಡ್ ಕಡೆಯಲ್ಲಿ 35 ವರ್ಷದ ಅನಾಮಧೇಯ ವ್ಯಕ್ತಿಯು ಜು.01 ರಂದು ಯಾವುದೋ ಖಾಯಿಲೆಯಿಂದ ಸ್ವಾಭಾವಿಕವಾಗಿ ಮೃತಪಟ್ಟಿದ್ದು, ವಾರಸುದಾರರು ತಿಳಿದಿರುವುದಿಲ್ಲ. ಮೃತನ ವಾರಸುದಾರರ ಪತ್ತೆಗಾಗಿ ಸಹಕರಿಸಬೇಕು ಎಂದು ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಹರೆ ಗುರುತು: ಎತ್ತರ ಸುಮಾರು 5.5ಅಡಿ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ, ತಲೆಯಲ್ಲಿ ಸುಮಾರು ಅರ್ಧ ಇಂಚು ಕಪ್ಪು ಕೂದಲು ಹಾಗೂ ಅರ್ಧ ಇಂಚು ಕಪ್ಪು ಮೀಸೆ, ಗಡ್ಡ ಬಿಟ್ಟಿರುತ್ತಾನೆ ಹಾಗೂ ಬಲಗೈಯಲ್ಲಿ ರಿಸ್ಟ್ ಮತ್ತು ಮೊಣಕೈ ಮಧ್ಯ ಆರ್‍ಯು ಉಮ ಅಮ್ಮ ಎಂಬ ಹಚ್ಚೆ ಗುರುತು ಇರುತ್ತದೆ.
ಮೃತನ ಮೈ ಮೇಲಿನ ಬಟ್ಟೆಗಳು: ನೀಲಿ ಬಣ್ಣದ ಬಿಳಿ, ಕೆಂಪು ಮತ್ತು ಬೂದು ಬಣ್ಣ ಮಿಶ್ರಿತ ಗೆರೆಗಳುಳ್ಳ ಅರ್ಧ ಟಿ-ಶರ್ಟ್, ಬಿಳಿ ಅರ್ಧ ಬನಿಯನ್, ಕೆಂಪು ಬಣ್ಣದ UROMAX ಹೆಸರಿನ ಒಳಉಡುಪು, ಕೆಂಪು ಬಣ್ಣದ ಅರ್ಧ ಚಡ್ಡಿ, ಬಲಗೈ ಮುಂಗೈಗೆ ಹಳದಿ ಬಣ್ಣದ ದಾರ, ಬಲಗಾಲ ಹಿಮ್ಮಡಿಯ ಮೇಲೆ ಕಪ್ಪು ಬಣ್ಣದ ಎರಡೆಳೆಯ ದಾರ, ಕೊರಳಲ್ಲಿ ಕೆಂಪು ಮತ್ತು ಹಸಿರು ಬಣ್ಣ ಮಿಶ್ರಿತ ದಾರ, ಸೊಂಟಕ್ಕೆ ಕೆಂಪು ಬಣ್ಣದ ಎರಡೆಳೆಯ ಉಡದಾರ ಧರಿಸಿರುತ್ತಾನೆ.
ಅನಾಮಧೇಯ ಮೃತ ವ್ಯಕ್ತಿಯ ವಾರಸುದಾರನ ಬಗ್ಗೆ ಮಾಹಿತಿ ಸಿಕ್ಕಲ್ಲಿ ರೈಲ್ವೇ ಪೆÇಲೀಸ್ ಠಾಣೆಯ ಉಪ ನಿರೀಕ್ಷಕರು ಮೊ.9480802131, ಪೆÇಲೀಸ್ ವೃತ್ತ ನಿರೀಕ್ಷಕರು ರೈಲ್ವೇ ಪೊಲೀಸ್ ವೃತ್ತ ರಾಯಚೂರು ಮೊ.9480800471 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ