ಶುಕ್ರವಾರ, ಜುಲೈ 7, 2023
ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಿವಿಧೆಡೆ ವಿದ್ಯುತ್ ವ್ಯತ್ಯಯ ಜು.09 ರಂದು
ಬಳ್ಳಾರಿ,ಜು.07(ಕರ್ನಾಟಕ ವಾರ್ತೆ):
ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಗೆ ಬರುವ 110/11 ಕೆವಿ ಸೌತ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ತ್ರೈಮಾಸಿಕ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಜುಲೈ 09 ರಂದು ಬೆಳಗ್ಗೆ 10 ರಿಂದ ಸಂಜೆ 05 ರವರೆಗೆ ಎಫ್-23, ಎಫ್-24, ಎಫ್-25, ಎಫ್-46, ಎಫ್-47 ಮತ್ತು ಎಫ್-48 ಫೀಡರ್‍ಗಳ ವ್ಯಾಪ್ತಿಗೆ ಬರುವ ನಗರದ ಬೆಂಗಳೂರು ರಸ್ತೆ, ಆಂಧ್ರಾಳ್ ರಸ್ತೆ, ಕೊಲ್ಮಿ ಚೌಕ್, ಕಾರ್ಕಲ ತೋಟ, ಬಾಪೂಜಿ ನಗರ, ಮಿಲ್ಲರಪೇಟೆ, ಮೋತಿ ವೃತ್ತ, ತೇರು ಬೀದಿ, ಇಂಡಸ್ಟ್ರೀಯಲ್ ಏರಿಯಾ ಹಂತ-1, ಮಹೇಶ್ ಪೈಪ್ಸ್, ಲಾರಿಟರ್ಮಿನಲ್, ಜೈನ್ ಮಾರ್ಕೆಟ್, ಸಾಯಿ ಕಾಲೋನಿ, ಎಪಿಎಮ್‍ಸಿ, ರಾಣಿತೋಟ, ಮರಿಸ್ವಾಮಿ ಮಠ, ದೊಡ್ಡ ಮಾರ್ಕೆಟ್, ತೋಪಿಗಲ್ಲಿ, ಬೊಮ್ಮನಾಳ್ ರೋಡ್ ಸೇರಿದಂತೆ ಇನ್ನೂ ಮುಂತಾದ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಬಳ್ಳಾರಿ ನಗರ ಜೆಸ್ಕಾಂನ ಉಪವಿಭಾಗ-1 ರ ಸಹಾಯಕ ಇಂಜಿನಿಯರ್ ಈ.ಟಿ.ಲಕ್ಷ್ಮೀ ಅವರು ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ