ಶುಕ್ರವಾರ, ಜುಲೈ 7, 2023

ಸಿರುಗುಪ್ಪ: ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಶಿಶಿಕ್ಷು ಮೇಳ ಜು.10 ರಂದು ಬಳ್ಳಾರಿ,ಜು.07(ಕರ್ನಾಟಕ ವಾರ್ತೆ): ಸಿರುಗುಪ್ಪದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜುಲೈ 10 ರಂದು ಬೆಳಗ್ಗೆ 10 ರಿಂದ ಸಂಜೆ 05 ರವರೆಗೆ ಜಿಲ್ಲಾ ಮಟ್ಟದ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಶಿಶಿಕ್ಷು ಮೇಳ ಏರ್ಪಡಿಸಲಾಗಿದೆ. ಈ ಮೇಳದಲ್ಲಿ ವಿವಿಧ ಉದ್ಯಮದವರು ಪಾಲ್ಗೊಳ್ಳುತ್ತಿದ್ದು, ಐ.ಟಿ.ಐ ವಿವಿಧ ವೃತ್ತಿಗಳಲ್ಲಿ ಪಾಸಾದ ಅಭ್ಯರ್ಥಿಗಳು ತಮ್ಮ ಬಯೋಡೇಟಾ, ಎಸ್.ಎಸ್.ಎಲ್.ಸಿ ಹಾಗೂ ಐ.ಟಿ.ಐ ಅಂಕಪಟ್ಟಿಗಳು, ಭಾವಚಿತ್ರದೊಂದಿಗೆ ಶಿಶಿಕ್ಷು ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಿರುಗುಪ್ಪ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಅಥವಾ ಮೊ.9448441568, 9902781032, 9980862730 ಗೆ ಸಂಪರ್ಕಿಸಬಹುದು ಎಂದು ಪ್ರಾಚಾರ್ಯ ವಿ.ಶೇಕಣ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ