ಬುಧವಾರ, ಜುಲೈ 5, 2023

ಸಿರುಗುಪ್ಪ: ವಿವಿಧ ಯೋಜನೆಗಳಡಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ ಬಳ್ಳಾರಿ,ಜು.05(ಕರ್ನಾಟಕ ವಾರ್ತೆ): ಸಿರುಗುಪ್ಪ ನಗರಸಭೆ ವ್ಯಾಪ್ತಿಯಲ್ಲಿ 2021-22ನೇ ಸಾಲಿನ ನಗರೋತ್ಥಾನ ಹಂತ-4 ರ ಯೋಜನೆಯ ಶೇ.24.10, (ಎಸ್.ಸಿ.ಎಸ್.ಪಿ, ಟಿ.ಎಸ್.ಪಿ), ಶೇ.7.25 ಮತ್ತು ಶೇ.5ರ ಅನುದಾನಗಳಲ್ಲಿ ವಿವಿಧ ಯೋಜನೆಗಳಡಿ ಸೌಲಭ್ಯಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಿರುಗುಪ್ಪ ನಗರಸಭೆ ಪೌರಾಯುಕ್ತ ಕೆ.ಜೀವನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 28 ಆಗಿರುತ್ತದೆ. *ಸೌಲಭ್ಯಗಳು:* ಎಸ್.ಸಿ.ಎಸ್.ಪಿ. ಅನುದಾನದಡಿ ವೈಯಕ್ತಿಕ ಸೌಲಭ್ಯಗಳು: ಸಿರುಗುಪ್ಪ ನಗರದ ಪರಿಶಿಷ್ಟ ಜಾತಿ ಜನಾಂಗದವರಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ (ಐ.ಹೆಚ್.ಹೆಚ್.ಎಲ್ ಯೋಜನೆಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳನ್ನು ಹೊರತುಪಡಿಸಿ) ರೂ.15 ಸಾವಿರದಂತೆ ಸಹಾಯಧನ ನೀಡಲಾಗುವುದು. ಟಿ.ಎಸ್.ಪಿ.ಯಡಿ ವೈಯಕ್ತಿಕ ಸೌಲಭ್ಯಗಳು: ನಿವೇಶನ ಹೊಂದಿದ ಸಿರುಗುಪ್ಪ ನಗರದ ಪರಿಶಿಷ್ಟ ಪಂಗಡದ ಮಹಿಳಾ ಫಲಾನುಭವಿಗಳು ಪಕ್ಕಾಮನೆ ನಿರ್ಮಾಣಕ್ಕಾಗಿ ರೂ.3 ಲಕ್ಷ ಸಹಾಯಧನ ನೀಡಲಾಗುವುದು (ಬ್ಯಾಂಕ್ ಮತ್ತು ನಗರ ಸ್ಥಳೀಯ ಸಂಸ್ಥೆ ಜಂಟಿಯಾಗಿ ಅಡಮಾನ ನೊಂದಣಿ ಮಾಡಿಕೊಳ್ಳಬೇಕು). ಶೇ.7.25ರ ಅನುದಾನಡಿ ವೈಯಕ್ತಿಕ ಸೌಲಭ್ಯಗಳು: ಸಿರುಗುಪ್ಪ ನಗರದ ಇತರೆ ಹಿಂದುಳಿದ ವರ್ಗದ ಜನಾಂಗದವರಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ (ಐ.ಹೆಚ್.ಹೆಚ್.ಎಲ್. ಯೋಜನೆಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳನ್ನು ಹೊರತುಪಡಿಸಿ) ರೂ.15 ಸಾವಿರದಂತೆ ಸಹಾಯಧನ ನೀಡಲಾಗುವುದು. ಶೇ.5ರ ಅನುದಾನದಡಿ ವೈಯಕ್ತಿಕ ಸೌಲಭ್ಯಗಳು: ಸಿರುಗುಪ್ಪ ನಗರದಲ್ಲಿರುವ ಅಂಗವಿಕಲರಿಗೆ ಜೀವನೋಪಾಯಕ್ಕಾಗಿ ಸ್ವಯಂ ವ್ಯಾಪಾರ ಮಾಡಿಕೊಳ್ಳಲು ವಾಣಿಜ್ಯ ಮಳಿಗೆಗಳ ರೆಡಿಮೇಡ್ ಟಿನ್‍ಶೆಡ್‍ಗಳನ್ನು ನಿರ್ಮಾಣ ಮಾಡಲು ಅರ್ಜಿ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ. ಬೇಕಾದ ದಾಖಲೆಗಳು: 2-ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ರೇಷನ್‍ಕಾರ್ಡ್, ಆಧಾರ್ ಕಾರ್ಡ್ ಪ್ರತಿ, ಮತದಾರರ ಗುರುತಿನ ಚೀಟಿ, ಚಾಲ್ತಿ ವರ್ಷದ ಆಸ್ತಿ ತೆರಿಗೆಯ ಪ್ರತಿ, ಚಾಲ್ತಿ ವರ್ಷದ ನಮೂನೆ-3ರ ಪ್ರತಿ, ಬ್ಯಾಂಕ್ ಪಾಸ್‍ಬುಕ್ ಪ್ರತಿ, ಅಂಗವಿಕಲರು ಅಂಗವಿಕಲತೆ ಬಗ್ಗೆ ವೈದ್ಯಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರದ ಪ್ರತಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಿರುಗುಪ್ಪ ನಗರಸಭೆ ಕಚೇರಿಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ