ಸೋಮವಾರ, ಜುಲೈ 10, 2023

ಸಿರುಗುಪ್ಪ: ವಿವಿಧೆಡೆ ವಿದ್ಯುತ್ ವ್ಯತ್ಯಯ ಜು.11 ರಂದು ಬಳ್ಳಾರಿ,ಜು.10(ಕರ್ನಾಟಕ ವಾರ್ತೆ): ಸಿರುಗುಪ್ಪ ಪಟ್ಟಣದ ಅರಳಿಗನೂರು ಕ್ರಾಸ್‍ನಿಂದ ಜಯಂತ್ ರೈಸ್‍ಮಿಲ್ ವರೆಗಿನ ಹಳೆಯ ವಿದ್ಯುತ್ ವಾಹಕ ಬದಲಾಯಿಸುವ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಜುಲೈ 11 ರಂದು ಬೆಳ್ಗಗೆ 10.30 ರಿಂದ ಸಂಜೆ 06 ರವರೆಗೆ 110/11 ಕೆವಿ ಸಿರುಗುಪ್ಪ ವಿದ್ಯುತ್ ವಿತರಣಾ ಕೇಂದ್ರದಿಂದ ಹಾದು ಹೋಗುವ ಎಫ್-13 ಫೀಡರ್‍ನ ಆದೋನಿ ರಸ್ತೆ ಕೈಗಾರಿಕಾ ಮಾರ್ಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಸಿರುಗುಪ್ಪ ಜೆಸ್ಕಾಂನ ಸಹಾಯಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ