ಸೋಮವಾರ, ಜುಲೈ 10, 2023

ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗಾಗಿ ಮನವಿ* ಬಳ್ಳಾರಿ,ಜು.10(ಕರ್ನಾಟಕ ವಾರ್ತೆ): ಕುರುಗೊಡು ವ್ಯಾಪ್ತಿಯ ಕೋಳೂರು ಕ್ರಾಸ್‍ನಲ್ಲಿನ ಸ್ವಾತಿ ಚಿಪ್ಸ್ ಸೆಂಟರ್ ಅಂಗಡಿ ಮುಂದೆ ಸುಮಾರು 65 ರಿಂದ 70 ವರ್ಷದ ಅಪರಿಚಿತ ವ್ಯಕ್ತಿಯು ಯಾವುದೋ ಖಾಯಿಲೆಯಿಂದ ಜು.08 ರಂದು ಮೃತಪಟ್ಟಿದ್ದು, ಮೃತನ ವಾರಸುದಾರರು ತಿಳಿದಿರುವುದಿಲ್ಲ. ವಾರಸುದಾರರ ಪತ್ತೆಗಾಗಿ ಸಹಕರಿಸಬೇಕು. ಚಹರೆ ಗುರುತು: ಎತ್ತರ ಸುಮಾರು 5.6 ಅಡಿ, ಕೋಲು ಮುಖ, ಕಪ್ಪು ಮೈಬಣ್ಣ, ತೆಳುವಾದ ಮೈಕಟ್ಟು, 5-6 ಇಂಚು ಉದ್ದ ಕೂದಲು ಹೊಂದಿರುತ್ತಾನೆ. ಖಾವಿ ಬಣ್ಣದ ಬಟ್ಟೆಗಳನ್ನು ಧರಿಸಿರುತ್ತಾನೆ. ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕುರುಗೊಡು ಪೆÇಲೀಸ್ ಠಾಣೆಯ ದೂ.08393-263433, ಮೊ.9480803051 ಹಾಗೂ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಕುರುಗೊಡು ಪೆÇಲೀಸ್ ಠಾಣೆಯ ಠಾಣಾಧಿಕಾರಿಗಳು ತಿಳಿಸಿದ್ದಾರೆ. -------- *ಅನಾಮಧೇಯ ಮೃತ ಹೆಂಗಸಿನ ಶವ; ವಾರಸುದಾರರ ಪತ್ತೆಗಾಗಿ ಮನವಿ* ಬಳ್ಳಾರಿ,ಜು.10(ಕರ್ನಾಟಕ ವಾರ್ತೆ): ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ತಾಳೂರು ರಸ್ತೆಯ ಕಾಲುವೆ ಹತ್ತಿರ ಸುಮಾರು 40-45 ವರ್ಷದ ಅನಾಮಧೇಯ ಹೆಂಗಸು ಅಸ್ವಸ್ಥಳಾಗಿದ್ದು, ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ. ಮೃತಳ ವಾರಸುದಾರರ ಪತ್ತೆಗಾಗಿ ಸಹಕರಿಸಬೇಕು ಎಂದು ಠಾಣೆಯ ಸಹಾಯಕ ಸಬ್‍ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ. ಚಹರೆ ಗುರುತು: 4.9 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕಪ್ಪು ಮತ್ತು ಬಿಳಿ ಮಿಶ್ರೀತ ಕೂದಲು ಹೊಂದಿರುತ್ತಾಳೆ. ಮೃತಳು ಕಪ್ಪು ಮತ್ತು ಹಳದಿ ಮಿಶ್ರೀತ ಬಣ್ಣದ ಸೀರೆ ಬಿಳಿ ಗೆರೆಗಳುಳ್ಳ ಸೀರೆ, ಹಸಿರು ಬಣ್ಣದ ಕುಪ್ಪಸ ಧರಿಸಿರುತ್ತಾಳೆ. ಅನಾಮಧೇಯ ಮೃತ ಹೆಂಗಸಿನ ವಾರಸುದಾರರ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಗಾಂಧಿನಗರ ಪೊಲೀಸ್‍ಠಾಣೆ ದೂ.08392-272192. ಪಿಐ ಮೊ.9480803046 ಹಾಗೂ ಬಳ್ಳಾರಿ ಕಂಟ್ರೋಲ್ ರೂಂ. ದೂ.08392-258100 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ. ------ *ಮೃತ ವ್ಯಕ್ತಿಯ ವಾರಸುದಾರರ ಪತ್ತೆಗಾಗಿ* ಬಳ್ಳಾರಿ,ಜು.10(ಕರ್ನಾಟಕ ವಾರ್ತೆ): ನಗರದ ವಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ನಾಗಮ್ಮ ದೇವಸ್ಥಾನದ ಹತ್ತಿರ ಅಂದಾಜು 40 ವರ್ಷದ ವ್ಯಕ್ತಿಯು ಯಾವುದೋ ಖಾಯಿಲೆಯಿಂದ ಅಸ್ವಸ್ಥನಾಗಿ ಜೂ.27 ರಂದು ಮೃತಪಟ್ಟಿದ್ದು, ಶವವು ವಿಮ್ಸ್ ಆಸ್ಪತ್ರೆಯ ಶವಗಾರ ಕೋಣೆಯಲ್ಲಿರುತ್ತದೆ. ಮೃತನ ವಾರಸುದಾರರ ಪತ್ತೆಗಾಗಿ ಸಹಕರಿಸಬೇಕು ಎಂದು ಕೌಲ್‍ಬಜಾರ್ ಪೊಲೀಸ್‍ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೃತನ ಚಹರೆ ಗುರುತು: ಅಂದಾಜು 5.5 ಅಡಿ ಎತ್ತರ, ತೆಳುವಾದ ಮೈಕಟ್ಟು, ಕೋಲು ಮುಖ ಹೊಂದಿದ್ದು, ಎಣ್ಣೆಗೆಂಪು ಮೈಬಣ್ಣ ಹೊಂದಿರುತ್ತಾನೆ. ಕುರುಚಲು ಕಪ್ಪು ಮತ್ತು ಬಿಳಿ ಮಿಶ್ರಿತ ಕೂದಲು ಹೊಂದಿರುತ್ತಾನೆ. ಮೈಮೇಲಿನ ಬಟ್ಟೆಗಳು: ತಿಳಿ ಹಳದಿ ಬಣ್ಣದ ಅಂಗಿ, ಚಾಕೋಲೇಟ್ ಬಣ್ಣದ ಚೌಕಳಿಯ ಲುಂಗಿ ಮತ್ತು ಕಂದು ಬಣ್ಣದ ಚಡ್ಡಿ ತೊಟ್ಟಿರುತ್ತಾನೆ. ವ್ಯಕ್ತಿ ತೊಟ್ಟಿದ್ದ ಬಟ್ಟೆಗಳನ್ನು ಪರಿಶೀಲಿಸಲಾಗಿ, ಆತನ ಬಳಿ ಆಧಾರ್‍ಕಾರ್ಡ್ ಇದ್ದು, ಆಧಾರ್‍ಕಾರ್ಡ್ ನಂ.430633663477 ಇದ್ದು, ಹೆಸರು ಮತ್ತು ವಿಳಾಸ ಶೇಕ್ ಮೆಹಬೂಬ್ ಭಾಷ ತಂದೆ ಹೊನ್ನೂರ್, ಮಂಗಳವಾರಿ ಕಾಲೋನಿ, ಅನಂತಪುರ ಅಂತ ಇರುತ್ತದೆ. ಮೃತನ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೌಲ್‍ಬಜಾರ್ ಪೊಲೀಸ್ ಠಾಣೆಯ ದೂ.08392-240731, ಪಿಐ ಮೊ.9480803047, ಬಳ್ಳಾರಿ ಕಂಟ್ರೋಲ್ ರೂಂ. ದೂ.08392-258100 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ