ಸೋಮವಾರ, ಸೆಪ್ಟೆಂಬರ್ 4, 2023
ಬಳ್ಳಾರಿ; ಜಿಪಂ ಆವರಣದಲ್ಲಿ ಸಂಸದರಿಂದ ಸ್ತ್ರೀ-ಶಕ್ತಿ ಕ್ಯಾಂಟೀನ್ ಉದ್ಘಾಟನೆ
ಬಳ್ಳಾರಿ,ಸೆ.04(ಕರ್ನಾಟಕ ವಾರ್ತೆ):
ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಸಿಐಎಫ್ ಅನುದಾನದಡಿ ರೂ.1.20 ಲಕ್ಷ ಸಹಾಯಧನದಲ್ಲಿ ಸ್ತೀ-ಶಕ್ತಿ ಸಂಘವತಿಯಿಂದ ಸ್ಥಾಪಿಸಲಾದ ಸ್ತ್ರೀ-ಶಕ್ತಿ ಕ್ಯಾಂಟೀನ್ ಅನ್ನು ಸಂಸದ ವೈ.ದೇವೆಂದ್ರಪ್ಪ ಅವರು ಸೋಮವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಜಿಪಂ ಉಪ ಕಾರ್ಯದರ್ಶಿ ಗಿರಿಜಾ ಶಂಕರ್, ಜಿಪಂ ಯೋಜನಾ ನಿರ್ದೇಶಕ ಪ್ರಮೋದ್ ಸೇರಿದಂತೆ ಜಿಲ್ಲಾ ಪಂಚಾಯತ್‍ನ ಇತರೆ ಅಧಿಕಾರಿಗಳು ಮತ್ತು ಯೋಜನೆಯ ಎಲ್ಲಾ ಸಿಬ್ಬಂದಿಗಳು ಮತ್ತು ಮಹಿಳೆಯರು ಇದ್ದರು.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ