ಶುಕ್ರವಾರ, ಸೆಪ್ಟೆಂಬರ್ 1, 2023

ಯುವಕ ಕಾಣೆ: ಪ್ರಕರಣ ದಾಖಲು

ಬಳ್ಳಾರಿ,ಸೆ.01(ಕರ್ನಾಟಕ ವಾರ್ತೆ): ತಾಲೂಕಿನ ಮಿಂಚೇರಿ ಗ್ರಾಮದ ನಿವಾಸಿ ನೀಲಕಂಠ ಎನ್ನುವ 24 ವರ್ಷದ ಯುವಕ ಪ್ರತಿ ದಿನ ಬಳ್ಳಾರಿಗೆ ಗೋಡೆ ಕಟ್ಟುವ ಕೆಲಸಕ್ಕೆ ಬರುತ್ತಿದ್ದು, ಆ.29ರಂದು ಕಾಣೆಯಾಗಿರುತ್ತಾನೆ ಈ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಹರೆ ಗುರುತು: ಎತ್ತರ 5.5 ಅಡಿ, ಕಪ್ಪು ಮೈಬಣ್ಣ, ಕಪ್ಪು ಕೂದಲು, ಕೋಲುಮುಖ ಹೊಂದಿರುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ತುಂಬುತೋಳಿನ ಅಂಗಿ, ಕಪ್ಪು ಬಣ್ಣದ ಕಾಟನ್ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆ ಮಾತನಾಡುತ್ತಾನೆ. ಕಾಣೆಯಾದ ಯುವಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ದೂ.08392-276461, ಮೊ.9480803049 ಹಾಗೂ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಠಾಣೆಯ ಸಹಾಯಕ ಸಬ್‍ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ