ಬುಧವಾರ, ಮಾರ್ಚ್ 13, 2024

ಅನಾಮಧೇಯ ಮೃತನ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಮಾ.13(ಕರ್ನಾಟಕ ವಾರ್ತೆ): ಇಲ್ಲಿನ ರೈಲ್ವೆ ನಿಲ್ದಾಣದ ಗೂಡ್‍ಶೆಡ್ಸ್ ಏರಿಯಾ ರೋಡ್ ನಂ.06ರಲ್ಲಿ ನಿಂತಿದ್ದ ಗೂಡ್ಸ್ ರೈಲ್ ಇಂಜಿನ ಮೇಲೆ 35 ವರ್ಷದ ಅನಾಮಧೇಯ ವ್ಯಕ್ತಿ ಹತ್ತಿ ರೈಲ್ವೆ ವಿದ್ಯುತ್ ತಂತಿ ಹಿಡಿದ ಪರಿಣಾಮ ಶಾಖದಿಂದ ದೇಹ ಸುಟ್ಟು ಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಾ.08 ರಂದು ಮೃತ ಪಟ್ಟಿರುತ್ತಾನೆ. ಶವವನ್ನು ವಿಮ್ಸ್ ಶವಗಾರ ಕೋಣೆಯಲ್ಲಿರಿಸಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ರೈಲ್ವೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಮನವಿ ಮಾಡಿದ್ದಾರೆ. ಮೃತನ ಚಹರೆ: ಎತ್ತರ 5.4 ಅಡಿ, ದುಂಡು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದಪ್ಪ ಮೂಗು, ದಪ್ಪ ಮೀಸೆ, ತಲೆಯಲ್ಲಿ ಸುಮಾರು ಒಂದುವರೆ ಇಂಚು ಕಪ್ಪು ಕೂದಲು, ಹಗಲವಾದ ಹಣೆ ಹಾಗೂ ಸಣ್ಣ ಗಡ್ಡ ಇದ್ದು, ವಿದ್ಯುತ್ ಶಾಖದಿಂದ ಮೃತನ ಮೈಮೇಲೆನ ಬಟ್ಟೆಗಳು ಸಂಪೂರ್ಣ ಸುಟ್ಟು ಹೋಗಿರುತ್ತದೆ. ಈ ಮೇಲ್ಕಂಡ ಚಹರೆ ಗುರುತುಳ್ಳ ವಾರಸುದಾರರ ಬಗ್ಗೆ ಸುಳಿವು ಸಿಕ್ಕಲ್ಲಿ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರ ಮೊ.9480802131 ಅಥವಾ ರಾಯಚೂರು ರೈಲ್ವೆ ಪೊಲೀಸ್ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರ ಮೊ.9480800471 ಇವರಿಗೆ ಸಂಪರ್ಕಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ