ಗುರುವಾರ, ಏಪ್ರಿಲ್ 4, 2024
ಹಿಂದಿ ವಿಷಯ ಪರೀಕ್ಷೆ ಸುಸೂತ್ರ; 20,679 ವಿದ್ಯಾರ್ಥಿಗಳು ಹಾಜರು, 330 ವಿದ್ಯಾರ್ಥಿಗಳು ಗೈರು
ಬಳ್ಳಾರಿ,ಏ.04(ಕರ್ನಾಟಕ ವಾರ್ತೆ):
ಜಿಲ್ಲೆಯಾದ್ಯಂತ ಗುರುವಾರ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯ ಹಿಂದಿ ಭಾಷಾ ವಿಷಯ ಪರೀಕ್ಷೆಯು ಸುಸೂತ್ರವಾಗಿ ನಡೆಯಿತು. ಪರೀಕ್ಷೆಗೆ ಒಟ್ಟು 20,679 ವಿದ್ಯಾರ್ಥಿಗಳು ಹಾಜರಾಗಿದ್ದು, 330 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಹಿಂದಿ ವಿಷಯ ಪರೀಕ್ಷೆಗೆ ಹೊಸದಾಗಿ 20,647 ವಿದ್ಯಾರ್ಥಿಗಳು, 362 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಒಟ್ಟು 21,009 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು.
ಬಳ್ಳಾರಿ ಪೂರ್ವ ವಲಯ 116, ಸಂಡೂರು 53, ಸಿರುಗುಪ್ಪ 55, ಬಳ್ಳಾರಿ ಪಶ್ಚಿಮ ವಲಯ 106 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 330 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ (ಆಡಳಿತ) ಉಮಾದೇವಿ ಅವರು ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ