ಗುರುವಾರ, ಏಪ್ರಿಲ್ 4, 2024
ನಿಮ್ಮೂರಲ್ಲಿಯೇ ಉದ್ಯೋಗ ಪಡೆದು ತಪ್ಪದೇ ಮತದಾನ ಮಾಡಿ: ಜಿಪಂ ಉಪಕಾರ್ಯದರ್ಶಿ ಗಿರಿಜಾ ಶಂಕರ್
ಬಳ್ಳಾರಿ,ಏ.04(ಕರ್ನಾಟಕ ವಾರ್ತೆ):
ನರೇಗಾ ಉದ್ಯೋಗ ಖಾತರಿ ಯೋಜನೆಯಡಿ ನಿಮ್ಮೂರಲ್ಲಿಯೇ ಉದ್ಯೋಗ ಪಡೆದು, ಸೂಕ್ತ ಕೂಲಿ ಹೊಂದುವ ಮೂಲಕ ಯಾರೂ ವಲಸೆ ಹೋಗಬಾರದು. ಮೇ 07 ರಂದು ನಡೆಯುವ ಮತದಾನ ದಿನದಂದು ತಪ್ಪದೇ ಮತ ಚಲಾಯಿಸಬೇಕು ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗಿರಜಾ ಶಂಕರ್ ಅವರು ಕರೆ ನೀಡಿದರು.
ಇಂದು, ಕುರುಗೋಡು ತಾಲ್ಲೂಕಿನ ಯರ್ರಂಗಳಿ, ಬಾದನಹಟ್ಟಿ, ಸಿದ್ದಮ್ಮನ ಹಳ್ಳಿ, ಸೋಮಸಮುದ್ರ, ಕೋಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯಡಿ ನಾಲಾ ಹೂಳು ತೆಗೆಯುವ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ, ಮತದಾನ ಜಾಗೃತಿ ಮೂಡಿಸಿದರು.
ನರೇಗಾ ಯೋಜನೆಯಡಿ 100 ಮಾನವ ದಿನಗಳನ್ನು ಒದಗಿಸಲಾಗುತ್ತಿದ್ದು, ಕೂಲಿ ಮೊತ್ತವು ರೂ.349 ಕ್ಕೆ ಹೆಚ್ಚಳಗೊಂಡಿದೆ. ಕೂಲಿಕಾರರು ಯಾರೂ ವಲಸೆ ಹೋಗಬಾರದು. ಕಡ್ಡಾಯವಾಗಿ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತ ಚಲಾಯಿಸಬೇಕು ಎಂದು ತಿಳಿಸಿದರು.
ಕಡ್ಡಾಯವಾಗಿ 2 ಬಾರಿ ಎನ್‍ಎಂಎಂಎಸ್ ಆಪ್ ಮೂಲಕವೇ ಹಾಜರಾತಿ ಹಾಕಬೇಕು. ಮತದಾನ ದಿನದಂದು ತಾವು ಎಲ್ಲಿಗೂ ಹೋಗದೇ ತಪ್ಪದೇ ಮತಗಟ್ಟೆಗೆ ತೆರಳಿ ಮತ ಹಾಕುವ ಮೂಲಕ ಹಾಜರಾತಿ ಹಾಕಬೇಕು ಎಂದು ತಿಳಿಸಿದರು.
ಇದೇ ಸಂದರ್ಭಲ್ಲಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ವೇಳೆ ಕುರುಗೋಡು ತಾಪಂ ಇಒ ನಿರ್ಮಲಾ, ಸಿದ್ದಮ್ಮನಹಳ್ಳಿ ಗ್ರಾಪಂ ಪಿಡಿಒ ಮಲ್ಲಿಕಾರ್ಜುನ, ಬಾದನಹಟ್ಟಿ ಗ್ರಾಪಂ ಪಿಡಿಒ ರಾಮಾಲಿ, ಯರ್ರಂಗಳಿ ಗ್ರಾಪಂ ಪಿಡಿಒ ರಾಮರಾವ್, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ಪಿ.ಶಿವರಾಮ ರೆಡ್ಡಿ, ತಾಂತ್ರಿಕ ಸಂಯೋಜಕ ಮಲ್ಲಿಕಾರ್ಜುನ, ಟಿಐಇಸಿ ಚಂದ್ರಶೇಖರ, ಬಿಎಫ್‍ಟಿ ಮಾರೇಶ್, ಹನುಮಂತು ಸೇರಿದಂತೆ ಕೂಲಿಕಾರ್ಮಿಕರು ಹಾಗೂ ಇತರರು ಉಪಸ್ಥಿತರಿದ್ದರು.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)




ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ