ಮಂಗಳವಾರ, ಏಪ್ರಿಲ್ 16, 2024

ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಸ್ಥಳಾಂತರ

ಬಳ್ಳಾರಿ,ಏ16(ಕರ್ನಾಟಕ ವಾರ್ತೆ): ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಉಪವಿಭಾಗದ ಸಹಾಯಕ ಕಾರ್ಯಪಾಲಕರ ಅಭಿಯಂತರರ ಕಚೇರಿಯನ್ನು ಹಳೇ ಜಿಲ್ಲಾಧಿಕಾರಿ ಕಚೇರಿ ಆವರಣದ ಲೋಕಲ್ ಆಡಿಟ್ ಜಂಟಿ ನಿರ್ದೇಶಕರ ಕಚೇರಿಗೆ ಸ್ಥಳಾಂತರಿಸಲಾಗಿದೆ ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಉಪವಿಭಾಗದ ಸಹಾಯಕ ಕಾರ್ಯಪಾಲಕರು ತಿಳಿಸಿದ್ದಾರೆ. ಈ ಹಿಂದೆ ನಗರದ ಒ.ಪಿ.ಡಿ ಬಳಿಯ ಸೌದ್ಗರ್ ಕಾಲೋನಿಯ ವಿದ್ಯಾನಗರದ ಮನೆ ನಂ:30 ಮತ್ತು 31 ರ ಇದ್ದು, ಏ.15 ರಿಂದ ಸ್ಥಳಾಂತರಗೊಳಿಸಲಾಗಿದೆ. ಕಚೇರಿಯ ಕೆಲಸಕ್ಕಾಗಿ ಸಾರ್ವಜನಿಕರು ಈ ಮೇಲೆ ತಿಳಿಸಿದ ಕಚೇರಿ ವಿಳಾಸಕ್ಕೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ