ಸೋಮವಾರ, ಏಪ್ರಿಲ್ 15, 2024

ವೃದ್ಧೆ ಕಾಣೆ; ಪತ್ತೆಗೆ ಮನವಿ

ಬಳ್ಳಾರಿ,ಏ.15(ಕರ್ನಾಟಕ ವಾರ್ತೆ): ಬಳ್ಳಾರಿ ರೈಲ್ವೇ ನಿಲ್ದಾಣದ ವೇದಿಕೆ ನಂ.2 ರಲ್ಲಿ ಬೆಳಗಾವಿ-ಭದ್ರಚಲಂ ಎಕ್ಸ್‍ಪ್ರೆಸ್ ರೈಲುಗಾಡಿ ಮೂಲಕ ತಾಂಡೂರಿಗೆ ಹೋಗುವಾಗ ಕೆ.ದೇವಿಬಾಯಿ ಎನ್ನುವ 70 ವರ್ಷದ ವೃದ್ಧೆ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಮನವಿ ಮನವಿ ಮಾಡಿದ್ದಾರೆ. ಕಾಣೆಯಾದ ವೃದ್ಧೆಯ ಚಹರೆ: ಎತ್ತರ 5.4 ಅಡಿ, ಕೋಲು ಮುಖ, ಬಿಳಿ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂಧರ್ಭದಲ್ಲಿ ಪಿಂಕ್ ಸೀರೆ ಧರಿಸಿರುತ್ತಾರೆ. ಹಿಂದಿ ಮತ್ತು ತೆಲುಗು ಭಾಷೆ ಮಾತನಾಡುತ್ತಾಳೆ. ಈ ಮೇಲ್ಕಾಣಿಸಿದ ಚಹರೆ ಗುರುತುಳ್ಳ ವೃದ್ಧೆಯ ಬಗ್ಗೆ ಮಾಹಿತಿ ದೊರೆತಲ್ಲಿ ಬಳ್ಳಾರಿ ರೈಲ್ವೇ ಪಿ.ಎಸ್ ದೂ:08392276063, ಮೊ:9480802131, ಇ-ಮೇಲ್ beಟಟಚಿಡಿಥಿಡಿಟಥಿ@ಞsಠಿ.gov.iಟಿ ಅಥವಾ ಬೆಂಗಳೂರು ರೈಲ್ವೇ ಕಂಟ್ರೋಲ್ ರೂಂ ಇ- ಮೇಲ್ ಜಛಿಡಿಟಥಿ@ಞsಠಿ.gov.iಟಿ ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ