ಗುರುವಾರ, ಜೂನ್ 13, 2024

ಜೂ.14 ರಂದು ವಿದ್ಯುತ್ ವ್ಯತ್ಯಯ

ಬಳ್ಳಾರಿ,ಜೂ.13(ಕರ್ನಾಟಕ ವಾರ್ತೆ): ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11ಕೆ.ವಿ ದಕ್ಷಿಣ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ ಜೂ.14 ರಂದು ಬೆಳಿಗ್ಗೆ 08 ಗಂಟೆಯಿಂದ ಮಧ್ಯಾಹ್ನ 03 ಗಂಟೆಯವರೆಗೆ ಬಳ್ಳಾರಿ ಗ್ರಾಮೀಣ ವ್ಯಾಪ್ತಿಯ 11ಕೆ.ವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂನ ಕಾರ್ಯ ಮತ್ತು ಪಾಲನಾ ಗ್ರಾಮೀಣ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮೋಹನಬಾಬು ಅವರು ತಿಳಿಸಿದ್ದಾರೆ. *ವಿದ್ಯುತ್ ಕಡಿತಗೊಳ್ಳುವ ಪ್ರದೇಶಗಳು:* ಎಫ್-43 ಸಿದ್ದಾಪುರ ರಸ್ತೆ ಮಾರ್ಗದ ಟಪಾಲ್ ಸ್ಟೀಲ್, ಸಿದ್ದಾಪುರ ರಸ್ತೆ, ಕೈಗಾರಿಕಾ ಪ್ರದೇಶ. ಎಫ್-30 ಗುಗ್ಗರಹಟ್ಟಿ ಕೈಗಾರಿಕಾ ಮಾರ್ಗದ ಗುಗ್ಗರಹಟ್ಟಿ, ಮುಂಡರಗಿ, ಬೈಪಾಸ್ ರಸ್ತೆ. ಎಫ್-27 ಆಂದ್ರಾಳ್ ಮಾರ್ಗದ ಆಂದ್ರಾಳ್, ಪಾತ್ರಬೂದಿಹಾಳ್, ಮಂಗಮ್ಮ ಗ್ರಾಮಗಳು. ಎಫ್-29 ಮಿಂಚೇರಿ ಎನ್.ಜೆ.ವೈ ಮಾರ್ಗದ ಮಿಂಚೇರಿ, ಎಸ್.ಜೆ ಕೋಟೆ ಗ್ರಾಮ, ಮುಂಡರಿಗಿ, ಚರಕುಂಟೆ ಗ್ರಾಮಗಳು. ಎಫ್-26 ಚರಕುಂಟ ಐ.ಪಿ ಫೀಡರ್‍ನ ಮುಂಡರಗಿ, ಚರಕುಂಟೆ, ವೈಬೂದಿಹಾಳ್ ಕೃಷಿ ಪ್ರದೇಶಗಳು ಸೇರಿದಂತೆ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ