ಗುರುವಾರ, ಜೂನ್ 13, 2024
ಜೂ.15 ರಂದು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ,ಜೂ.13(ಕರ್ನಾಟಕ ವಾರ್ತೆ):
ನಗರ ಜೆಸ್ಕಾಂ ವ್ಯಾಪ್ತಿಯ 110/11ಕೆ.ವಿ ಬಿಸಿಲಹಳ್ಳಿ ವಿದ್ಯುತ್ ಉಪ-ಕೇಂದ್ರದಲ್ಲಿ ವಿದ್ಯುತ್ ಪರಿವರ್ತಕದ ನಿರ್ವಹಣೆ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುರಿಂದÀ ಜೂ.15 ರಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ನಗರ ಜೆಸ್ಕಾಂ ಉಪವಿಭಾಗ-2 ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ ರೆಡ್ಡಿ ಅವರು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಎಫ್-64 ಫೀಡರ್ ವ್ಯಾಪ್ತಿಯ ಎಸ್.ಆರ್.ಎಂ ಲೇ ಔಟ್, ಸಂಸ್ಕøತಿ ಶಾಲೆ, ವಿಶಾಲ ನಗರ, ಹನುಮಾನ್ ನಗರ, ಬಿ.ಗೋನಾಳ್, ಹೌಸಿಂಗ್ ಬೋರ್ಟ್, ವೆಂಕಟಲಕ್ಷ್ಮೀ ನಗರ, ಅಂಜಿನಪ್ಪ ನಗರ, ಎಸ್.ಆರ್.ಪಿ ಕಾಲೋನಿ, ಎಮ್.ಜಿ ಅನಂತಪುರ ರಸ್ತೆ, ಆಗಡಿ ಮಾರೆಪ್ಪ ಕಾಂಪೌಂಡ್, ದತ್ತ ಸಾಯಿ ನಗರ, ಆಶ್ರಯ ಕಾಲೋನಿ.
ಎಫ್-62 ಫೀಡರ್ ವ್ಯಾಪ್ತಿಯ ಬಿ.ಗೋನಾಳ, ವೆಂಕಟಲಕ್ಷ್ಮೀ ನಗರ, ಹರಿಶ್ಚಂದ್ರ ಘಾಟ್, ನಬಿ ಕಾಲೋನಿ, ಆಶ್ರಯ ಕಾಲೋನಿ, ಗ್ರಾಂಡ್ ಫಂಕ್ಷನ್ ಹಾಲ್ ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ