ಗುರುವಾರ, ಜೂನ್ 13, 2024
ಜೂ.14 ರಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ,ಜೂ.13(ಕರ್ನಾಟಕ ವಾರ್ತೆ):
ಸಿರುಗುಪ್ಪ ಜೆಸ್ಕಾಂ ವ್ಯಾಪ್ತಿಯ 110/11 ಕೆವಿ ಸಿರಿಗೇರಿ ಕ್ರಾಸ್ ವಿದ್ಯುತ್ ವಿತರಣಾ ಕೇಂದ್ರದ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಳ್ಳುತ್ತಿರುವುದರಿಂದ ಜೂ.14 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ಸಿರಿಗೇರಿ ಕ್ರಾಸ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಶಾನವಾಸಪುರ, ಶ್ರೀನಿವಾಸ ಕ್ಯಾಂಪ್, ಬೈರಾಪುರ ಸಿರಿಗೇರಿ, ದಾಸಪುರ, ಕೊಂಚಿಗೇರಿ, ಸಿದ್ಧರಾಂಪುರ, ಮುದ್ದಟನೂರು, ಮಾಳಾಪುರ, ಚನ್ನಪಟ್ಟಣ, ಹಾವಿನಹಾಳ್, ಗುಂಡಿಗನೂರು, ಸಿರಿಗೇರಿ ಕ್ರಾಸ್, ಹಾಗಲೂರು, ಹಾಗಲೂರು ಹೊಸಳ್ಳಿ, ಈರಣ್ಣ ಕ್ಯಾಂಪ್, ದರೂರು, ತಾಳೂರು, ಊಳೂರು ಮತ್ತು ಉತ್ತನೂರು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸಿರುಗುಪ್ಪ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿಲ್ಪ.ಇ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ