ಗುರುವಾರ, ಜೂನ್ 13, 2024
ಅನಾಮಧೇಯ ಮೃತ ವ್ಯಕ್ತಿ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಜೂ.13(ಕರ್ನಾಟಕ ವಾರ್ತೆ):
ಬಳ್ಳಾರಿ ಮತ್ತು ಓಬಳಾಪುರಂ ರೈಲ್ವೆ ನಿಲ್ದಾಣ ಮಧ್ಯೆ ಎಲ್.ಸಿ ಗೇಟ್-12ರ ಬಳಿ ಅಂದಾಜು 30 ವರ್ಷದ ಅನಾಮಧೇಯ ವ್ಯಕ್ತಿಯ ಮೃತ ದೇಹ ಜೂನ್ 13 ರಂದು ದೊರೆತಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕೆಂದು ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಮನವಿ ಮಾಡಿದ್ದಾರೆ.
ಮೃತನ ಚಹರೆ: ಎತ್ತರ ಸುಮಾರು 5.6 ಅಡಿ, ದಪ್ಪ ಮೂಗು, ಅಗಲವಾದ ಹಣೆ, ಕೋಲು ಮುಖ, ಗೋಧಿ ಮೈ ಬಣ್ಣ, ಸದೃಢವಾದ ದೇಹ ಹೊಂದಿದ್ದು, ತಲೆಯಲ್ಲಿ ಸುಮಾರು ಮೂರು ಇಂಚು ಕಪ್ಪು ಕೂದಲು, ಒಂದು ಇಂಚು ಕಪ್ಪು ಮೀಸೆ ಹಾಗೂ ಗಡ್ಡ ಹೊಂದಿರುತ್ತಾನೆ.
ಬಲಗೈ ತೋಳಿನ ಹತ್ತಿರ ಇಂಗ್ಲೀಷ್‍ನಲ್ಲಿ ‘ಎ’ ಎನ್ನುವ ಹಚ್ಚೆ ಗುರುತು ಇರುತ್ತದೆ. ಮೃತನ ಮೈಮೇಲೆ ಕೆಂಪು ಮತ್ತು ಹಸಿರು ಗೆರೆಗಳುಳ್ಳ ರೆಡಿಮೇಡ್ ಆಫ್ ಶರ್ಟ್, ಬಿಳಿ ಬಣ್ಣದ ಆಫ್ ಬನಿಯನ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ಸೊಂಟಕ್ಕೆ ಕಪ್ಪು ಬಣ್ಣದ ಬೆಲ್ಟ್ ಇರುತ್ತದೆ.
ಈ ಮೇಲ್ಕಂಡ ಚಹರೆ ಗುರುತುಗಳುಳ್ಳ ಮೃತನ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರ ಮೊ.9480802131 ಅಥವಾ ರಾಯಚೂರು ರೈಲ್ವೆ ಪೊಲೀಸ್ ವೃತ್ತದ ಪೊಲೀಸ್ ವೃತ್ತ ನಿರೀಕ್ಷರ ಮೊ.9480800471 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ