ಶುಕ್ರವಾರ, ಜೂನ್ 9, 2023

ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ : ಜಿಲ್ಲಾ ಕೈಗಾರಿಕಾ ಕೇಂದ್ರದ ವಿವಿಧ ಯೋಜನೆಗಳಿಗೆ ಅನುಮೋದನೆ
ಬಳ್ಳಾರಿ,ಜೂ.09(ಕರ್ನಾಟಕ ವಾರ್ತೆ): ಜಿಲ್ಲಾ ಕೈಗಾರಿಕಾ ಕೇಂದ್ರದ ವಿವಿಧ ಯೋಜನೆಗಳಿಗೆ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು, ಜಿಲ್ಲಾ ಕೈಗಾರಿಕಾ ಕೇಂದ್ರದ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಿದರು. ವಿವಿಧ ಉತ್ಪನ್ನಗಳನ್ನು ತಯಾರಿಸುವ ಯೋಜನೆಗಳಾದ ರೈಸ್ ಮಿಲ್, ಮ್ಯಾನುಫ್ಯಾಕ್ಚರಿಂಗ್ ಆಫ್ ಆಡ್ ಬ್ಲ್ಯೂ (ಡಿಇಎಫ್), ಜಿಜಿಬಿಎಸ್ (ಬಾಲ್ ಮಿಲ್ ಪ್ಲಾಂಟ್), ಎಂ-ಸ್ಯಾಂಡ್ ಮತ್ತು ಅಗ್ರಿಗೇಟ್ಸ್, ಡಿಇಎಫ್ (ಡಿಸೇಲ್ ಎಕ್ಸಾಸ್ಟ್ ಫ್ಲೂಯಿಡ್ ಯುನಿಟ್) ಮ್ಯಾನುಫ್ಯಾಕ್ಚರಿಂಗ್ ಆಫ್ ಐರನ್ ರೂಫ್ ಶೀಟ್ಸ್, ಕಾಟನ್ ಮಿಲ್, ವೇರ್‍ಹೌಸಿಂಗ್, ರೆಡಿಮೇಡ್ ಗಾಮೆರ್ಂಟ್ಸ್ ಹಾಗೂ ಇತರೆ ಒಟ್ಟು 20 ಯೋಜನಾ ಘಟಕಗಳಿಂದ ಹೂಡಿಕೆಯಾಗುವ ಒಟ್ಟು ಬಂಡವಾಳ ರೂ.6172.96 ಲಕ್ಷ ಮತ್ತು ಸದರಿ ಘಟಕಗಳಿಂದ 314 ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಘಟಕ ಕುರಿತು ಅನುಮೋದನೆ ನೀಡಲಾಯಿತು. ಈ ಸಂದರ್ಭದಲ್ಲಿ ಬಳ್ಳಾರಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶ್ರೀನಿವಾಸ್, ಎಲ್.ಡಿ.ಎಂ ಸೋಮನಗೌಡ ಐನಾಪುರ, ಸೋಮಶೇಖರ್ ಬಿ.ಜೆಡಿ, ಡಿಐಸಿ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ