ಶುಕ್ರವಾರ, ಜೂನ್ 9, 2023

ಎಲ್ಲಾ ನಾಣ್ಯಗಳನ್ನು ಕಾನೂನುಬದ್ಧವಾಗಿ ಸ್ವೀಕರಿಸಿ; ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಹೇಳಿಕೆ
ಬಳ್ಳಾರಿ,ಜೂ.09(ಕರ್ನಾಟಕ ವಾರ್ತೆ): ಆರ್‍ಬಿಐ ಸಾರ್ವಜನಿಕರ ವಹಿವಾಟಿನ ಅಗತ್ಯಗಳನ್ನು ಪೂರೈಸುವ ಸಲುವಾಗಿ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ವಿವಿಧ ವಿಷಯಗಳೊಂದಿಗೆ ಕಾಲಕಾಲಕ್ಕೆ ವಿಶಿಷ್ಟ ಲಕ್ಷಣಗಳುಳ್ಳ ನಾಣ್ಯಗಳನ್ನು ಪರಿಚಯಿಸುತ್ತಿದೆ. ಸಾರ್ವಜನಿಕರು ತಮ್ಮ ಅನುಮಾನಗಳನ್ನು ಬದಿಗಿಟ್ಟು, ನಿಯಮಿತವಾಗಿ ಚಲಾವಣೆಗೆ ಬಂದ ವಿವಿಧ ಮುಖಬೆಲೆಯ ನಾಣ್ಯಗಳನ್ನು ಕಾನೂನಾತ್ಮಕವಾಗಿ ಸ್ವೀಕರಿಸಬೇಕು ಎಂದು ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ. ಪ್ರಸ್ತುತ 50 ಪೈಸೆ ನಾಣ್ಯಗಳು, ರೂ.1, ರೂ.2, ರೂ.5 ಮತ್ತು ರೂ.10 ಮುಖಬೆಲೆಯ ವಿವಿಧ ಗಾತ್ರದ ಮತ್ತು ವಿನ್ಯಾಸದ ನಾಣ್ಯಗಳು ಚಲಾವಣೆಯಲ್ಲಿವೆ. ಅವುಗಳನ್ನು ಸ್ವೀಕರಿಸಬೇಕು. ರೂ.10 ನಾಣ್ಯಗಳನ್ನು ಸ್ವೀಕರಿಸದಿರುವುದು ನಾಣ್ಯ ಕಾಯ್ದೆ 2011ರ ಸೆಕ್ಷನ್ 6(1)ರ ಉಲ್ಲಂಘನೆಯಾಗುವುದು ಎಂದು ತಿಳಿಸಿದ್ದಾರೆ. ಬಳ್ಳಾರಿ ಚೇಂಬರ್ ಆಫ್ ಕಾಮರ್ಸ್ ಮತ್ತು ಲೀಡ್ ಬ್ಯಾಂಕ್ ಕಚೇರಿ, ಕೆನರಾ ಬ್ಯಾಂಕ್ ಎಲ್ಲಾ ಮುಖಬೆಲೆಯ ನಾಣ್ಯಗಳನ್ನು ನಿರ್ದಿಷ್ಟವಾಗಿ ರೂ.10 ನಾಣ್ಯಗಳನ್ನು ಬಳಸುವಂತೆ ತಮ್ಮ ಸದಸ್ಯರನ್ನು ಮನವೊಲಿಸಲು ಪ್ರಯತ್ನಿಸುತ್ತಿದೆ ಮತ್ತು ಅದನ್ನು ಎಲ್ಲಾ ವ್ಯಾಪಾರಿಗಳು ಸ್ವೀಕರಿಸುತ್ತಾರೆ ಮತ್ತು ಸುಲಭವಾಗಿ ಬ್ಯಾಂಕ್ ಶಾಖೆಗಳಲ್ಲಿ ಠೇವಣಿ ಮಾಡಬಹುದಾಗಿದೆ. ಇದು ದಿನನಿತ್ಯದ ವಹಿವಾಟುಗಳಲ್ಲಿನ ಚಿಲ್ಲರೆ ಹಣದ ಸಮಸ್ಯೆಗಳನ್ನು ನಿವಾರಿಸುತ್ತದೆ. ಕೆಲವು ಕಡೆ ಅಂತಹ ನಾಣ್ಯಗಳ ಅಸಲಿ ಬಗ್ಗೆ ಜನರಲ್ಲಿ ಅನುಮಾನಗಳಿವೆ. ಇದರ ಪರಿಣಾಮವಾಗಿ ಕೆಲವು ವ್ಯಾಪಾರಿಗಳು, ಅಂಗಡಿಕಾರರು ಮತ್ತು ಸಾರ್ವಜನಿಕರು ನಾಣ್ಯಗಳನ್ನು ಸ್ವೀಕರಿಸಲು ಹಿಂಜರಿಯುತ್ತಾರೆ. ಇದು ನಾಣ್ಯಗಳ ಮುಕ್ತ ಬಳಕೆ ಮತ್ತು ಚಲಾವಣೆಗೆ ಅಡ್ಡಿಯಾಗುತ್ತದೆ. ನಾಣ್ಯಗಳ ಚಲಾವಣೆ ಬಗ್ಗೆ ಯಾವುದೇ ವದಂತಿಗಳನ್ನು ನಂಬದಂತೆ ಸಾರ್ವಜನಿಕರಿಗೆ ರಿಸರ್ವ್ ಬ್ಯಾಂಕ್ ಮನವಿ ಮಾಡಿದ್ದು, ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಎಲ್ಲಾ ವಹಿವಾಟುಗಳಲ್ಲಿ ಈ ನಾಣ್ಯಗಳನ್ನು ಕಾನೂನುಬದ್ಧವಾಗಿ ಸ್ವೀಕರಿಸುವುದನ್ನು ಮುಂದುವರಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ