ಗುರುವಾರ, ಜೂನ್ 1, 2023
ಇಪಿಎಫ್‍ಒ: ಪ್ರಯಾಸ್ ಕಾರ್ಯಕ್ರಮದಡಿ ಪಿಂಚಣಿ ಪಾವತಿ ಆದೇಶ ವಿತರಣೆ
ಬಳ್ಳಾರಿ,ಜೂ.01(ಕರ್ನಾಟಕ ವಾರ್ತೆ):
ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯು ಖಾಸಗಿ ವಲಯಗಳಲ್ಲಿ ಸೇವೆ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ವಯೋ ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಅತ್ಯಂತ ತ್ವರಿತಗತಿಯಲ್ಲಿ ಪಿಂಚಣಿ ಪಾವತಿ ಆದೇಶಗಳನ್ನು ವಿತರಿಸುತ್ತಿದೆ.
ನಗರದ ರಾಘವೇಂದ್ರ ಕಾಲೋನಿಯಲ್ಲಿರುವ ಜಿಲ್ಲಾ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯು ಗುರುವಾರದಂದು ಜೆಎಸ್‍ಡಬ್ಲ್ಯೂ ಲಿಮಿಟೆಡ್, ಎಮ್‍ಎಸ್ ಹೊಸ್ಪೆಟ್ ಸ್ಟೀಲ್ಸ್ ಲಿಮಿಟೆಡ್, ಎಮ್‍ಎಸ್‍ಪಿಎಲ್, ಜಾನಕಿ ಕಾರ್ಪೋರೇಷನ್ ಇತ್ಯಾದಿ ಖಾಸಗಿ ಕಂಪನಿಗಳಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ 17 ಪಿಂಚಣಿದಾರರಿಗೆ ಪ್ರಯಾಸ್ ಕಾರ್ಯಕ್ರಮದಲ್ಲಿ ಪಿಂಚಣಿ ಪಾವತಿ ಆದೇಶ ಪತ್ರಗಳನ್ನು ವಿತರಿಸಲಾಯಿತು.
ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಾದ ವೆಂಕಟಸುಬ್ಬಯ್ಯ ಅವರು ಪಿಂಚಣಿ ಪಾವತಿ ಆದೇಶ ಪತ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಪಿಎಫ್ ಆಯುಕ್ತರಾದ ಟಿ.ಎನ್.ನಂದನ್ ಸಿಂಗ್, ಎಸ್‍ಎಸ್ (ಪಿಂಚಣಿ) ಹರೀಶ್.ಜೆ.ಶಾಸ್ತ್ರೀ ಸೇರಿದಂತೆ ಇತರರು ಇದ್ದರು.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ