ಶುಕ್ರವಾರ, ಜೂನ್ 9, 2023
ಜೂ.11 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಬಳ್ಳಾರಿ,ಜೂ.09(ಕರ್ನಾಟಕ ವಾರ್ತೆ):
ಬಳ್ಳಾರಿ ನಗರ ಜೆಸ್ಕಾಂ ವ್ಯಾಪ್ತಿಗೆ ಬರುವ 110/11 ಕೆವಿ ಸೌತ್ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಎಫ್-25 ಮತ್ತು ಎಫ್-46 ಫೀಡರ್‍ಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಜೂ.11 ರಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ನಗರದ ಕಾರ್ಕಲ ತೋಟ, ಹನುಮಾನ್ ನಗರ, ಪಾತ್ರಬೂದಿಹಾಳ್, ರಾಣಿತೋಟ, ಮರಿಸ್ವಾಮಿ ಮಠ, ದೊಡ್ಡ ಮಾರ್ಕೆಟ್, ಸಣ್ಣ ಕೈಗಾರಿಕಾ ಕಂಪನಿ ಹಾಗೂ ಪಿಲೆಟ್ ಮಾರೆಮ್ಮ ಗುಡಿ ಹಿಂಭಾಗ, ಇಂಡಸ್ಟ್ರೀಯಲ್ ಏರಿಯಾ ಸೇರಿ ಇನ್ನೂ ಮುಂತಾದ ಏರಿಯಾಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ನಗರ ಜೆಸ್ಕಾಂನ ಉಪವಿಭಾಗ-1 ರ ಸಹಾಯಕ ಇಂಜಿನಿಯರ್ ಈ.ಟಿ.ಲಕ್ಷ್ಮೀ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ