ಬುಧವಾರ, ಜುಲೈ 5, 2023

ಯುವಕ ಕಾಣೆ: ಪ್ರಕರಣ ದಾಖಲು* ಬಳ್ಳಾರಿ,ಜು.05(ಕರ್ನಾಟಕ ವಾರ್ತೆ): ನಗರದ ರಾಧಿಕ ಚಿತ್ರ ಮಂದಿರ ಹತ್ತಿರದ ಜಮೀರ್ ಆಟೋ ಗ್ಯಾರೇಜ್ ಬಳಿ ಮಹಮ್ಮದ್ ಸದ್ದಾಂಹುಸೇನ್ ಎನ್ನುವ 26 ವರ್ಷದ ಯುವಕ ಜು.03 ರಂದು ಕಾಣೆಯಾಗಿರುವ ಕುರಿತು ಬ್ರೂಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಸಹಾಯಕ ಪೋಲಿಸ್ ಸಬ್‍ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಹರೆ ಪಟ್ಟಿ: 5.6 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ಕಪ್ಪು ತಲೆಕೂದಲು ಹೊಂದಿರುತ್ತಾನೆ. ಕನ್ನಡ, ತೆಲುಗು, ಹಿಂದಿ ಭಾಷೆ ಮಾತನಾಡುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಕಂದುಬಣ್ಣದ ಟೀ-ಶರ್ಟ್ ಹಾಗೂ ಕಪ್ಪು ಬಣ್ಣ ಪ್ಯಾಂಟ್ ಧರಿಸಿರುತ್ತಾನೆ. ಕೈಯಲ್ಲಿ ಸ್ಟೀಲ್ ವಾಚ್ ಇರುತ್ತದೆ. ಕಾಣೆಯಾದ ಯುವಕನ ಬಗ್ಗೆ ಸುಳಿವು ಸಿಕ್ಕಲ್ಲಿ ಬ್ರೂಸ್‍ಪೇಟೆ ಪೊಲೀಸ್ ಠಾಣೆಯ ದೂ.08392-272022, ಠಾಣೆಯ ಪಿ.ಐ ಮೊ.9480803045 ಹಾಗೂ ಬಳ್ಳಾರಿ ಕಂಟ್ರೋಲ್ ರೂಂ.08392-258100, 258102 ಗೆ ಸಂಪರ್ಕಿಸಬಹುದು ಅವರು ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ