ಬುಧವಾರ, ಜುಲೈ 5, 2023

ಅನಾಮಧೇಯ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗಾಗಿ ಮನವಿ* ಬಳ್ಳಾರಿ,ಜು.05(ಕರ್ನಾಟಕ ವಾರ್ತೆ): ಬ್ರೂಸ್‍ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಸಂಗಮ್ ಚಿತ್ರಮಂದಿರ ಎದುರು ಮಸೀದಿಯ ಮುಂದೆ ಸುಮಾರು 60 ವರ್ಷದ ಅನಾಮಧೇಯ ವ್ಯಕ್ತಿಯು ತೀವ್ರ ಅಸ್ವಸ್ಥನಾಗಿ, ಯಾವುದೋ ಖಾಯಿಲೆಗೆ ತುತ್ತಾಗಿ ಜು.04 ರಂದು ಮೃತಪಟ್ಟಿದ್ದು, ಶವವು ವಿಮ್ಸ್‍ನ ಶವಗಾರ ಕೋಣೆಯಲ್ಲಿರುತ್ತದೆ. ವಾರಸುದಾರರ ಪತ್ತೆಗೆ ಸಹಕರಿಸಬೇಕು. ಮೃತನ ಚಹರೆ: ಅಂದಾಜು 5.1 ಅಡಿ ಎತ್ತರ, ತೆಳುವಾದ ಮೈಕಟ್ಟು, ಕಪ್ಪು ಮೈ ಬಣ್ಣ, ಕೋಲು ಮುಖ ಹೊಂದಿರುತ್ತಾನೆ. ತಲೆಯಲ್ಲಿ ಸುಮಾರು 2 ಇಂಚು ಉದ್ದನೇಯ ಬಿಳಿ ಕೂದಲು ಹಾಗೂ ಬಿಳಿ ಗಡ್ಡ ಹೊಂದಿರುತ್ತಾನೆ. ಕಂದು ಬಣ್ಣದ ಬನಿಯನ್ ಹಾಗೂ ಹಳೆ ಪ್ಯಾಂಟ್ ಧರಿಸಿರುತ್ತಾನೆ. ಅನಾಮಧೇಯ ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬ್ರೂಸ್‍ಪೇಟೆ ಪೊಲೀಸ್ ಠಾಣೆಯ ದೂ.08392-272022, ಠಾಣೆಯ ಪಿ.ಐ ಮೊ.9480803045 ಹಾಗೂ ಬಳ್ಳಾರಿ ಕಂಟ್ರೋಲ್ ರೂಂ.08392-258100, 258102 ಗೆ ಸಂಪರ್ಕಿಸಬಹುದು ಎಂದು ಬ್ರೂಸ್‍ಪೇಟೆ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ