ಬುಧವಾರ, ಆಗಸ್ಟ್ 30, 2023

ಸೆ.02ರಂದು ತಾಪಂ ಕೆಡಿಪಿ ಸಭೆ

ಬಳ್ಳಾರಿ,ಆ.30(ಕರ್ನಾಟಕ ವಾರ್ತೆ): ಬಳ್ಳಾರಿ ತಾಲೂಕು ಪಂಚಾಯಿತಿಯ ತ್ರೈಮಾಸಿಕ ಕೆಡಿಪಿ ಸಭೆಯು ಸೆ.02 ರಂದು ಬೆಳಿಗ್ಗೆ 10.30 ಕ್ಕೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ. ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಯ ವಿವಿಧ ಯೋಜನೆಯ ಪ್ರಗತಿ ವರದಿಯನ್ನು 10 ಪ್ರತಿಗಳಲ್ಲಿ ಆ.31 ರೊಳಗಾಗಿ ವಿಷಯ ನಿರ್ವಾಹಕ ರಾಮಕೃಷ್ಣ ಇವರಿಗೆ ಸಲ್ಲಿಸಬೇಕು. ಸಭೆಗೆ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಹಾಜರಾಗುವಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ ಮಡಗಿನ ಬಸಪ್ಪ ಅವರು ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ