ಗುರುವಾರ, ಆಗಸ್ಟ್ 31, 2023
ಕಂಪ್ಲಿ ಪಟ್ಟಣದಲ್ಲಿ ವಿವಿಧೆಡೆ ದಾಳಿ; ಇಬ್ಬರು ಬಾಲಕಾರ್ಮಿಕರು, ಇಬ್ಬರು ಕಿಶೋರ ಕಾರ್ಮಿಕರ ರಕ್ಷಣೆ
ಬಳ್ಳಾರಿ,ಆ.31(ಕರ್ನಾಟಕ ವಾರ್ತೆ):
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕಂಪ್ಲಿ ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಮಿತಿಯಿಂದ ಕಂಪ್ಲಿ ಪಟ್ಟಣದ ವಿವಿಧೆಡೆ ಆಕಸ್ಮಿಕ ದಾಳಿ ನಡೆಸಿ ಗುರುವಾರದಂದು, 2 ಬಾಲಕಾರ್ಮಿಕ ಮತ್ತು 2 ಕಿಶೋರ ಕಾರ್ಮಿಕ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎ.ಮೌನೇಶ್ ಅವರು ತಿಳಿಸಿದ್ದಾರೆ.
ಜಿಲ್ಲಾ ಬಾಲಕಾರ್ಮಿಕ ಯೋಜನೆ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ, ಪೋಲಿಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣ ಘಟಕ ಮತ್ತು ಬಿಡಿಡಿಎಸ್ ಚೈಲ್ಡ್‍ಲೈನ್ ಸಹಯೋಗದೊಂದಿಗೆ ಕಂಪ್ಲಿಯ ಮುಖ್ಯ ಬೀದಿಗಳಲ್ಲಿ, ಬಳ್ಳಾರಿ ರಸ್ತೆ, ಕುರುಗೋಡು ರಸ್ತೆ, ಮತ್ತು ಹೊಸಪೇಟೆ ರಸ್ತೆಯ ಮಂತಾದ ಸ್ಥಳಗಳಲ್ಲಿ ಗ್ಯಾರೇಜ್, ಬೇಕರಿ, ಹೋಟೆಲ್, ಮೆಕ್ಯಾನಿಕ್ ಶಾಪ್, ಹಣ್ಣಿನ ಅಂಗಡಿ ಕಿರಾಣಿ ಅಂಗಡಿ ಇತ್ಯಾದಿ ಉದ್ದಿಮೆಗಳ ಮೇಲೆ ಆಕಸ್ಮಿಕ ದಾಳಿ ಮಾಡಿ 2 ಬಾಲಕಾರ್ಮಿಕ ಮತ್ತು 2 ಕಿಶೋರ ಕಾರ್ಮಿಕ ಮಕ್ಕಳನ್ನು ಬಿಡುಗಡೆಗೊಳಿಸಲಾಗಿದೆ.
ರಕ್ಷಣೆ ಮಾಡಿದ ಮಕ್ಕಳನ್ನು ಪೋಷಕರ ವಶಕ್ಕೆ ಒಪ್ಪಿಸಿ ಮಕ್ಕಳ ವಯಸ್ಸಿನ ಧೃಡೀಕರಣವನ್ನು ಪಡೆದು, ಸಂಬಂದಿಸಿದ ಮಾಲೀಕರ ವಿರುದ್ದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಗುರುವಾರದಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ 06 ಪ್ರಕರಣಗಳನ್ನು ದಾಖಲಿಸಿ ರೂ.1600 ಗಳನ್ನು ಸ್ಥಳದಲ್ಲಿಯೇ ದಂಡ ವಸೂಲಿ ಮಾಡಲಾಯಿತು.
ಟಾಸ್ಕ್‍ಪೋರ್ಸ್ ಸಮಿತಿಯಲ್ಲಿ ತಹಶೀಲ್ದಾರೆ ಗೌಸೀಯ ಬೇಗಂ, ಕಾರ್ಮಿಕ ನಿರೀಕ್ಷಕ ಅಶೋಕ್, ಕಂಪ್ಲಿ ಪುರಸಭೆಯ ಪರಿಸರ ಅಭಿಯಂತರೆ ಸ್ವಾತಿ, ತಾಲೂಕು ವೈದ್ಯಾಧಿಕಾರಿ ಅರುಣ್.ಜಿ, ತಾಪಂ ಕಂದಾಯ ನಿರೀಕ್ಷಕರಾದ ಎಂ.ಜಗದೀಶ್, ಅಪರಂಜಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಬೋಜರಾಜ್ ಹಾಜರಿದ್ದರು.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ