ಮಂಗಳವಾರ, ಆಗಸ್ಟ್ 22, 2023
ಯುವಕ ಕಾಣೆ: ಪ್ರಕರಣ ದಾಖಲು
ಬಳ್ಳಾರಿ,ಆ.22(ಕರ್ನಾಟಕ ವಾರ್ತೆ):
ಕುರುಗೋಡು ತಾಲೂಕಿನ ವದ್ದಟ್ಟಿ ಗ್ರಾಮದ ಕೆಂಚಮ್ಮನ ಗುಡಿ ಹತ್ತಿರದ 02ನೇ ವಾರ್ಡ್‍ನ ನಿವಾಸಿ ವಿರುಪಾಕ್ಷಿ ಎನ್ನುವ 28 ವರ್ಷದ ಯುವಕ 2022ನೇ ನ.15ರಂದು ಮನೆಯಿಂದ ಕಾಣೆಯಾಗಿರುವ ಕುರಿತು ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಠಾಣಾಧಿಕಾರಿಗಳು ತಿಳಿಸಿದ್ದಾರೆ.
ಚಹರೆ ಗುರುತು: ಎತ್ತರ 5.4 ಅಡಿ, ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಬಿಳಿ ಮತ್ತು ಹಸಿರು ಬಣ್ಣದ ಹೂಗಳಿರುವ ತುಂಬು ತೋಳಿನ ಅಂಗಿ ಹಾಗೂ ಹಳದಿ ಬಣ್ಣದ ಲುಂಗಿ ಧರಿಸಿರುತ್ತಾನೆ. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ.
ಕಾಣೆಯಾದ ಯುವಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಎಸ್‍ಪಿ ಅವರ ದೂ.08392-258400, 08392-258300, ತೋರಣಗಲ್ಲು ಉಪವಿಭಾಗ ಡಿಎಸ್‍ಪಿ ಅವರ ಮೊ.9480803010, ಕುರುಗೋಡು ಸಿಪಿಐ ಮೊ.9480803039, ಠಾಣೆಯ ಪಿಎಸ್‍ಐ ದೂ.08393-263433 ಹಾಗೂ ಮೊ.9480803051 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ