ಶನಿವಾರ, ಆಗಸ್ಟ್ 19, 2023
ಅನಾಮಧೇಯ ಮೃತ ಮಹಿಳೆ ಶವ; ವಾರಸುದಾರರ ಪತ್ತೆಗಾಗಿ ಮನವಿ
ಬಳ್ಳಾರಿ,ಆ.19(ಕರ್ನಾಟಕ ವಾರ್ತೆ):
ತಾಲೂಕಿನ ಕಪ್ಪಗಲ್ ಕ್ಯಾಂಪ್‍ನ ಕಪ್ಪಗಲ್ ಹೆಚ್‍ಎಲ್‍ಸಿ ಡಿಪಿ-15 ಆರ್ ವಿತರಣಾ ಕಾಲುವೆಯಲ್ಲಿ ಸುಮಾರು 30ರಿಂದ 32ವರ್ಷದ ಅನಾಮಧೇಯ ಮಹಿಳೆಯ ಶವವು ಆ.18 ರಂದು ತೇಲಿಕೊಂಡು ಬಂದಿದ್ದು, ಮೃತಳ ವಾರಸುದಾರರು ತಿಳಿದಿರುವುದಿಲ್ಲ.
ಚಹರೆ ಗುರುತು: ಎತ್ತರ ಅಂದಾಜು 5.2 ಅಡಿ, ತೆಳುವಾದ ಮೈಕಟ್ಟು, ದುಂಡುಮುಖ, ಕಪ್ಪು ಮೈಬಣ್ಣ ಹೊಂದಿದ್ದು, ತಲೆಯಲ್ಲಿ 6 ಇಂಚು ಉದ್ದದ ಕೂದಲು ಇರುತ್ತದೆ. ಮೈಮೇಲೆ ಕಪ್ಪು ಬಣ್ಣದ ಒಳಉಡುಪು ಇರುತ್ತದೆ. ಮೇಲ್ನೋಟಕ್ಕೆ ಯಾವುದೇ ಗಾಯಗಳು ಕಂಡುಬಂದಿರುವುದಿಲ್ಲ.
ಅನಾಮಧೇಯ ಮೃತ ಮಹಿಳೆಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಪಿಐ ದೂ.08392-276461 ಹಾಗೂ ಮೊ.9480803049 ಗೆ ಸಂಪರ್ಕಿಸಬಹುದು ಎಂದು ಬಳ್ಳಾರಿ ಗ್ರಾಮೀಣ ಪೊಲೀಸ್‍ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ