ಮಂಗಳವಾರ, ಆಗಸ್ಟ್ 15, 2023

ರಾಬಕೋವಿ ಹಾಲು ಒಕ್ಕೂಟ ನಿಗಮದಿಂದ ನಂದಿನಿ ಸಿಹಿ ಉತ್ಸವ ಕಾರ್ಯಕ್ರಮ ನಂದಿನಿ ಸಿಹಿ ಉತ್ಸವದಲ್ಲಿ ಶೇ.20ರಷ್ಟು ರಿಯಾಯಿತಿ ದರದಲ್ಲಿ ಮಾರಾಟ: ಎಂ.ರವೀಂದ್ರ

ಬಳ್ಳಾರಿ,ಆ.15(ಕರ್ನಾಟಕ ವಾರ್ತೆ): ಇಂದಿನಿಂದ ಆ.20ರವರೆಗೆ ನಂದಿನಿ ಸಿಹಿ ಉತ್ಸವ ನಡೆಯಲಿದ್ದು, ಉತ್ಸವದಲ್ಲಿ ನಂದಿನಿಯ ಸುಮಾರು 70 ಉತ್ಪನ್ನಗಳಲ್ಲಿ 30 ಸಿಹಿ ಉತ್ಪನ್ನಗಳಿಗೆ ಶೇ.20ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ಪ್ರತಿಯೊಬ್ಬ ಗ್ರಾಹಕರು ಗುಣಮಟ್ಟ ನಂದಿನಿ ಉತ್ಪನ್ನಗಳ ಬಳಕೆ ಮಾಡುವಂತೆ ರಾಬಕೋವಿ ಜಿಲ್ಲಾ ಹಾಲು ಒಕ್ಕೂಟದ ಉಪಾಧ್ಯಕ್ಷರಾದ ಎಂ.ರವೀಂದ್ರ ಅವರು ಹೇಳಿದರು. ನಗರದ ಕೆಎಂಎಫ್‍ನ ಮುಖ್ಯದ್ವಾರದ ಪಕ್ಕದಲ್ಲಿನ ಎಸ್.ಬಸಮ್ಮ ನಂದಿನಿ ಕ್ಷೀರಮಳಿಗೆ(ಪಾರ್ಲರ್) ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ “ನಂದಿನಿ ಸಿಹಿ ಉತ್ಸವ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯಾದ್ಯಾಂತ 16 ಒಕ್ಕೂಟಗಳಿದ್ದು, ಕಹಾಮ ವತಿಯಿಂದ ಎಲ್ಲಾ ಒಕ್ಕೂಟಗಳಲ್ಲೂ ಕಳೆದ 15 ವರ್ಷಗಳಿಂದ ನಂದಿನಿ ಸಿಹಿ ಉತ್ಸವ ಕಾರ್ಯಕ್ರಮ ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬರಲಾಗಿದೆ ಎಂದು ಹೇಳಿದರು. ನಂದಿನಿ ಸಿಹಿ ಉತ್ಸವದಲ್ಲಿ ಮೈಸೂರಿನ ಮೈಸೂರ್ ಪಾಕ್, ಧಾರವಾಡದ ಧಾರವಾಡ ಪೇಡಾ, ಬೆಳಗಾಂನ ಬೆಳಗಾಂ ಕುಂದ, ಏಲಕ್ಕಿ ಪೇಡಾ, ಬಾದಾಮ್ ಪೇಡಾ, ಬೆಸನ್ ಲಡ್ಡು, ಸಿರಿಧಾನ್ಯ ಲಾಡು ಮತ್ತು ಇತರೆ ಸಿಹಿ ಉತ್ಪನ್ನಗಳನ್ನು ಒಕ್ಕೂಟದ ಎಲ್ಲಾ ಶಾಫಿ/ಎ.ಟಿ.ಎಂ. ಪಾರ್ಲರ್/ಕ್ಷೀರ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ನೆಚ್ಚಿನ ನಂದಿನಿ ಗ್ರಾಹಕರನ್ನು ಸಂತೃಪ್ತಿ ಪಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು. ಒಕ್ಕೂಟದ ಮಾರುಕಟ್ಟೆ ವಿಭಾಗ ಮುಖ್ಯಸ್ಥ ಜಿ.ಬಿ.ಉದಯಕುಮಾರ ಅವರು ಮಾತನಾಡಿ, ರೈತರ ಹಿತ ರಕ್ಷಣೆ ಮಾಡುವುದು. ಗ್ರಾಹಕರಿಗೆ ತಾಜಾ ಹಾಗೂ ಪರಿಶುದ್ಧವಾದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡುವುದು ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. ಒಕ್ಕೂಟದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಎಸ್.ವೆಂಕಟೇಶ ಗೌಡ ಅವರು ಮಾತನಾಡಿ, “ಗೋವಿನಿಂದ ಗ್ರಾಹಕರವರಗೆ ಗುಣಮಟ್ಟದ ಶ್ರೇಷ್ಠತೆ” ಎಂಬ ಧ್ಯೇಯವಾಕ್ಯ ಹೊಂದಿ ಕಹಾಮವು ಹಾಲು(ಶೇಖರಣೆ-ಸಂಸ್ಕರಣೆ-ಮಾರುಕಟ್ಟೆ) ಮೂಲಕ ಉತ್ತಮ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸಲು ನಿರಂತರವಾಗಿ ಪರಿಶ್ರಮಿಸುತ್ತಿದೆ ಎಂದರು. ಉತ್ತಮ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು “ನಂದಿನಿ” ಬ್ರ್ರಾಂಡ್ ಹೆಸರಿನಲ್ಲಿ ಅತ್ಯಂತ ಸ್ಪರ್ಧಾತ್ಮಕ ಬೆಲೆಗಳಲ್ಲಿ ಗ್ರಾಹಕರಿಗೆ ಒದಗಿಸಿ ಸಮೃದ್ದ ಆರೋಗ್ಯ ಹರಡುತ್ತಿದೆ ಎಂದು ತಿಳಿಸಿದ ಅವರು, ಆ.15ರಿಂದ ಆ.20ರವರೆಗೆ ನಡೆಯುವ ಸಿಹಿ ಉತ್ಸವದ ಶೇ.20ರಷ್ಟು ರಿಯಾಯಿತಿಯನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಎನ್.ಧನಂಜಯ ಹಮಲ್, ಉಪವ್ಯವಸ್ಥಾಪಕ ಎಸ್.ಎಸ್.ಲಿಂಗಪ್ಪ, ಡಾ.ಶಂಬು ಕುಮಾರ್, ಸಹಾಯಕ ವ್ಯವಸ್ಥಾಪಕ ಟಿ.ಮಲ್ಲಿಕಾರ್ಜುನ, ಮಾರುಕಟ್ಟೆಯ ಸಹಾಯಕ ವ್ಯವಸ್ಥಾಪಕಿ ಕೆ.ಆರ್.ಇಂದುಕಲಾ, ಖರೀದಿ ಮತ್ತು ಉಪವಿಭಾಗ ಅಧೀಕ್ಷಕ ವಿ.ತಿಪ್ಪೇರುದ್ರ, ನೂರ್ ಮಹಮ್ಮದ್, ಕ.ಹಾ.ಮ.ದ ಬಳ್ಳಾರಿ ಡಿಪೋ ಇನ್‍ಚಾರ್ಜ್ ತಿಪ್ಪೇಸ್ವಾಮಿ ಸೇರಿದಂತೆ ಮಾರುಕಟ್ಟೆ ವಿಭಾಗದ ಸಿಬ್ಬಂದಿಗಳಾದ ಸಿ.ಎನ್. ಮಂಜುನಾಥ, ಬಾಬು.ಬಿ ಮತ್ತು ನಂದಿನಿ ಕ್ಷೀರಮಳಿಗೆ ಡೀಲರ್ ಎಸ್.ಬಸಮ್ಮ ಸೇರಿದಂತೆ ಇತರರು ಉಪಸ್ಥ್ಥಿತರಿದ್ದರು. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ