ಶುಕ್ರವಾರ, ಆಗಸ್ಟ್ 18, 2023

ಅನಾಮಧೇಯ ಮೃತ ಹೆಂಗಸಿನ ಶವ; ವಾರಸುದಾರರ ಪತ್ತೆಗಾಗಿ ಮನವಿ

ಬಳ್ಳಾರಿ,ಆ.18(ಕರ್ನಾಟಕ ವಾರ್ತೆ): ನಗರ ಹೊರವಯದ ಹವಂಭಾವಿ ಹೆಚ್.ಎಲ್.ಸಿ 14ನೇ ವಿತರಣಾ ಕಾಲುವೆಯಲ್ಲಿ ಸುಮಾರು 40 ರಿಂದ 42 ವರ್ಷದ ಅನಾಮಧೇಯ ಮೃತ ಹೆಂಗಸಿನ ಶವವು ಆ.17 ರಂದು ತೇಲಿಕೊಂಡು ಬಂದಿದ್ದು, ಮೃತಳ ವಾರಸುದಾರರು ತಿಳಿಸಿದಿರುವುದಿಲ್ಲ. ಪತ್ತೆಗಾಗಿ ಸಹಕರಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟೆರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಹರೆ ಗುರುತು: ಎತ್ತರ ಅಂದಾಜು 5 ಅಡಿ, ದುಂಡುಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ತಲೆಯಲ್ಲಿ 5.6 ಇಂಚು ಉದ್ದ ಕೂದಲು ಹೊಂದಿರುತ್ತಾಳೆ. ಬಿಳಿ ಬಣ್ಣದ ಕೆಂಪು ಬಾರ್ಡ್‍ರ್‍ವುಳ್ಳ ಡಿಸೈನ್ ಸೀರೆ ಹಾಗೂ ಕೆಂಪು ಬಣ್ಣದ ಕುಪ್ಪಸ ಮತ್ತು ಕೆಂಪು ಬಣ್ಣದ ಲಂಗ ತೊಟ್ಟಿರುತ್ತಾಳೆ. ಅನಾಮಧೇಯ ಮೃತ ಹೆಂಗಸಿನ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂ.08392-276461, ಪಿ.ಐ ಮೊ.9480803049 ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ