ಮಂಗಳವಾರ, ಆಗಸ್ಟ್ 22, 2023

ಬಾಲಕ ನಾಪತ್ತೆ: ಪತ್ತೆಗೆ ಮನವಿ

ಬಳ್ಳಾರಿ,ಆ.22(ಕರ್ನಾಟಕ ವಾರ್ತೆ): ಕುರುಗೋಡು ತಾಲೂಕಿನ ಕೋಳೂರು ಗ್ರಾಮದ 4ನೇ ವಾರ್ಡ್‍ನ ನಿವಾಸಿ ಕಿರಣ್‍ಕುಮಾರ್ ಎನ್ನುವ 17 ವರ್ಷದ ಬಾಲಕ ಸಿರುಗುಪ್ಪ ಪಟ್ಟಣದ ಶಾಂತಿನಿಕೇತನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, 2022 ಆ.02 ರಂದು ಕಾಲೇಜಿಗೆ ಹೋಗಿಬರುತ್ತೇನೆ ಎಂದು ಕಾಣೆಯಾಗಿದ್ದು, ಕುರುಗೋಡು ಪೊಲೀಸ್‍ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ತೆಗೆ ಸಹಕರಿಸಬೇಕು ಎಂದು ಠಾಣೆಯ ಠಾಣಾಧಿಕಾರಿಗಳು ತಿಳಿಸಿದ್ದಾರೆ. ಚಹರೆ ಗುರುತು: ಎತ್ತರ 5.3 ಅಡಿ, ಕೋಲುಮುಖ, ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ಚೆಕ್ಸ್ ಇರುವ ಶರ್ಟ್ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ ಭಾಷೆ ಮಾತನಾಡುತ್ತಾನೆ. ಮೇಲ್ಕಂಡ ಚಹರೆಯುಳ್ಳ ಬಾಲಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಎಸ್‍ಪಿ ಅವರ ದೂ.08392-258400, 08392-258300, ತೋರಣಗಲ್ಲು ಉಪವಿಭಾಗ ಡಿಎಸ್‍ಪಿ ಅವರ ಮೊ.9480803010, ಕುರುಗೋಡು ಸಿಪಿಐ ಮೊ.9480803039, ಠಾಣೆಯ ಪಿಎಸ್‍ಐ ದೂ.08393-263433 ಹಾಗೂ ಮೊ.9480803051 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ