ಗುರುವಾರ, ಆಗಸ್ಟ್ 17, 2023
ಮಹಿಳೆ ಕಾಣೆ; ಪ್ರಕರಣ ದಾಖಲು
ಬಳ್ಳಾರಿ,ಆ.17(ಕರ್ನಾಟಕ ವಾರ್ತೆ) :
ನಗರದ ಬಂಡಿಮೋಟ್‍ನ ನಿವಾಸಿ ಜಯಮ್ಮ ಎನ್ನುವ 60 ವರ್ಷದ ಮಹಿಳೆ ಜೂ.29 ರಂದು ಕಾಣೆಯಾಗಿರುವ ಕುರಿತು ಮಹಿಳಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ.
ಕಾಣೆಯಾದ ಮಹಿಳೆ ಚಹರೆ ಗುರುತು: ಎತ್ತರ 5 ಅಡಿ, ದಪ್ಪ ಮೈಕಟ್ಟು, ಸದಾ ಕಪ್ಪು ಮೈಬಣ್ಣ, ದುಂಡು ಮುಖ ಇರುತ್ತದೆ. ಮಾತನಾಡಲು ಬರುವುದಿಲ್ಲ, ಸ್ವಲ್ಪ ಮಾನಸಿಕ ಅಸ್ವಸ್ಥಳಾಗಿರುತ್ತಾರೆ. ಕಾಣೆಯಾದ ಸಂದರ್ಭದಲ್ಲಿ ಆರೆಂಜ್ ಮತ್ತು ಬಿಳಿ ಮಿಶ್ರಣದ ಸೀರೆ ಮತ್ತು ಕುಪ್ಪಸ ಧರಿಸಿರುತ್ತಾಳೆ.
ಮೇಲ್ಕಂಡ ಚಹರೆಯುಳ್ಳ ಮಹಿಳೆ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮಹಿಳಾ ಪೆÇಲೀಸ್ ಠಾಣೆಯ ದೂ.08392-268108, ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ