ಸೋಮವಾರ, ಆಗಸ್ಟ್ 21, 2023

ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆ ಸೆ.04ರಂದು

ಬಳ್ಳಾರಿ,ಆ.21(ಕರ್ನಾಟಕ ವಾರ್ತೆ): ಜಿಲ್ಲಾ ಪಂಚಾಯತಿಯಿಂದ ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ “ದಿಶಾ” (District Development Co-ordination and Monitoring Committee) ತ್ರೈಮಾಸಿಕ ಸಭೆಯನ್ನು ಲೋಕಸಭಾ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ದಿಶಾ ಸಮಿತಿಯ ಅಧ್ಯಕ್ಷ ವೈ.ದೇವೆಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಸೆ.04ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಪಂಚಾಯತ್‍ನ ನಜೀರ್‍ಸಾಬ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಹಾಗೂ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿ ರಾಹುಲ್ ಶರಣಪ್ಪ ಸಂಕನೂರು ಅವರು ತಿಳಿಸಿದ್ದಾರೆ. *ಸಭೆಯಲ್ಲಿ ಚರ್ಚಿಸುವ ವಿಷಯಗಳು:* ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ದೀನ್ ದಯಾಳ್ ಅಂತ್ಯೋದಯ ಯೋಜನೆ- ಎನ್.ಆರ್.ಎಲ್.ಎಂ, ದೀನ್ ದಯಾಳ್ ಉಪಾಧ್ಯಾಯ-ಗ್ರಾಮೀಣ ಕೌಶಲ್ಯ ಯೋಜನೆ(ಡಿಡಿಯು-ಜಿಕೆವೈ), ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ(ಪಿ.ಎಂ.ಜಿ.ಎಸ್.ವೈ), ರಾಷ್ಟ್ರೀಯ ಸಂಧ್ಯಾ ಸುರಕ್ಷಾ ವೇತನ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ(ಹೌಸಿಂಗ್ ಫಾರ್‍ಆಲ್), ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ(ಪಿ.ಎಂ.ಎ.ವೈ-ಗ್ರಾ), ಸ್ವಚ್ಛ ಭಾರತ್ ಮಿಷನ್(ನಗರ ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ), ಜಲ ಜೀವನ್ ಮಿಷನ್, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ(ಪಿಎಂಕೆಎಸ್‍ವೈ). ಡಿಜಿಟಲ್ ಇಂಡಿಯಾ ಲ್ಯಾಂಡ್ ರೆಕಾರ್ಡ್ ಮೊರ್ಡ್ ನೈಸೇಷನ್ ಪೆÇ್ರೀಗ್ರಾಮ್. ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ(ಡಿಡಿಯುಜಿಜೆವೈ). ಶ್ಯಾಮ್‍ಪ್ರಸಾದ್ ಮುಖರ್ಜಿ ರೂರ್ಬನ್ ಮಿಷನ್. ಅಟಲ್ ಮಿಷನ್ ಫಾರ್ ರಿಜುವೆನಷನ್ ಅಂಡ್ ಅರ್ಬನ್ ಟ್ರಾನ್ಸ್ ಪಾರಮೇಷನ್. ಉಜ್ವಲ್ ದಿಸ್ಕಾಂ ಅಶೂರೆನ್ಸ್ ಯೋಜನೆ(ಉದಯ್). ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ(ಪಿಎಮ್‍ಎಫ್‍ಬಿವೈ), ರಾಷ್ಟ್ರೀಯ ಆರೋಗ್ಯ ಮಿಷನ್(ಎನ್‍ಹೆಚ್‍ಎಂ). ಸರ್ವ ಶಿಕ್ಷಣ ಅಭಿಯಾನ, ಬೇಟಿ ಬಚಾವೋ ಬೇಟಿ ಪಡಾವೋ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ(ಐಸಿಡಿಎಸ್), ಅಕ್ಷರ ದಾಸೋಹ ಯೋಜನೆ, ಪ್ರಧಾನ ಮಂತ್ರಿ ಉಜ್ವಲ್ ಯೋಜನೆ(ಪಿಎಂಯುವೈ)-ಬಿಪಿಎಲ್ ಕುಟುಂಬಗಳಿಗೆ ಎಲ್‍ಪಿಜಿ ವಿತರಣೆ, ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್ ಯೋಜನೆ, ರಾಷ್ಟ್ರೀಯ ಆಹಾರ್ ಭದ್ರತಾ ಯೋಜನೆ, ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ, ಡಿಜಿಟಲ್ ಇಂಡಿಯಾ-ಪಬ್ಲಿಕ್ ಇಂಟರ್‍ನೆಟ್ ಆಕ್ಸ್‍ಸ್ ಪ್ರೊಗ್ರಾಮ್, ಕೋವಿಡ್-19, ಪ್ರಧಾನ ಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ, ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ, ಪ್ರಧಾನಮಂತ್ರಿಗಳ ಉದ್ಯೋಗ ಸೃಜನೆ ಯೋಜನೆ, ವೇದವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮ, ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಗಳು (ಟೆಲಿಕಾಂ, ರೇಲ್ವೇ, ಹೈವೇ, ವಾಟರ್ ವೇಸ್ ಇತ್ಯಾದಿ), ಕಮಾಂಡ್ ಏರಿಯಾ ಡೆವಲಪ್‍ಮೆಂಟ್ ಅಂಡ್ ವಾಟರ್ ಮ್ಯಾನೇಜ್‍ಮೆಂಟ್ ಪ್ರೋಗ್ರಾಮ್ (ಕಾಡಾ), ಸುಗಮ್ಯ ಭಾರತ ಅಭಿಯಾನ ಹಾಗೂ ಇನ್ನೀತರೆ ಕೇಂದ್ರ ಪುರಸ್ಕøತ ಯೋಜನೆಗಳ ಮಾಹಿತಿ ಕುರಿತು ಚರ್ಚಿಸಲಾಗುವುದು. ಸದರಿ ಸಭೆಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ನಿಗದಿಪಡಿಸಿದ ಸಮಯಕ್ಕೆ ತಪ್ಪದೇ ಹಾಜರಾಗಬೇಕು ಎಂದು ಅವರು ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ